Site icon PowerTV

ನುಡಿದಂತೆ ನಡೆಯದ ಏಕೈಕ ವ್ಯಕ್ತಿ ಸಿಎಂ ಸಿದ್ದರಾಮಯ್ಯ : ಬಿಜೆಪಿ ಲೇವಡಿ

ಬೆಂಗಳೂರು: ರಾಜ್ಯದಲ್ಲಿ ನುಡಿದಂತೆ ನಡೆಯದ ಏಕೈಕ ವ್ಯಕ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಎಂದು ರಾಜ್ಯ ಬಿಜೆಪಿ ಲೇವಡಿ ಮಾಡಿದೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಚುನಾವಣೆಗೂ ಮುನ್ನ ಕರ್ನಾಟಕದ ಜನತೆಯ ಕಿವಿ ಮೇಲೆ ಕಲರ್ ಕಲರ್ ಹೂವಿಡಲು ಕೊಟ್ಟ ಗ್ಯಾರಂಟಿ ಯುವನಿಧಿ ಬಗ್ಗೆ ಈಗ ಅವರಿಗೆ ಮರೆತೇ ಹೋಗಿದೆ. ಆದರೆ, ಜನ ನೆನಪಿಟ್ಟುಕೊಂಡಿದ್ದಾರೆ ಸಿದ್ದರಾಮಯ್ಯರವರೇ ಎಂದು ಕುಟುಕಿದೆ.

ನೀವು ಈ ಸುದ್ದಿ ಓದಿದ್ದೀರಾ? : ಜನರಿಂದಲೇ ದೋಚುವ ಸರ್ಕಾರ ಎಂಬುದು ನಾಡಹಬ್ಬದಲ್ಲೂ ಸಾಬೀತಾಗಿದೆ : ಬಿಜೆಪಿ ಕಿಡಿ

ಕೈಕೊಟ್ಟ ಮುಂಗಾರು ರೈತರನ್ನು ಹೈರಾಣಾಗಿಸಿತು. ವಿದ್ಯುತ್ ದರ ಏರಿಕೆ, ಟ್ರಾನ್ಸ್‌ಫಾರ್ಮರ್‌ಗೂ ರೈತರೇ ಪಾವತಿಸಬೇಕೆಂದು ಕಾಂಗ್ರೆಸ್ ರೈತರ ಜೀವ ಹಿಂಡುತ್ತಿದೆ. ಹೀಗೆ ಈಗಾಗಲೇ ಸೋತಿರುವ ರೈತರ ಕೊರಳಿನ ಸಾಲದ ಕುಣಿಕೆ ಬಿಗಿ ಮಾಡಿ ಕಾಂಗ್ರೆಸ್ ಸರ್ಕಾರ ರೈತರ ಮಾರಣಹೋಮ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದೆ‌.

ದಿನ ದಿನಕ್ಕೂ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ತಡೆಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದನ್ನು ‌ಸಿದ್ದರಾಮಯ್ಯರವರು ನಾಡಿಗೆ ಸ್ಪಷ್ಟಪಡಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

Exit mobile version