Site icon PowerTV

ಕರ್ನಾಟಕದ ಇತಿಹಾಸದಲ್ಲೇ ಇಂಥ ನಾಡ ದ್ರೋಹಿ ಸಿಎಂರನ್ನ ಕಂಡಿರಲಿಲ್ಲ : ಬಿಜೆಪಿ ಆಕ್ರೋಶ

ಬೆಂಗಳೂರು: ಕಾಂಗ್ರೆಸ್ ಬಂದಿದೆ, ಕರ್ನಾಟಕದ ಖಜಾನೆ ಖಾಲಿಯಾಗಿದೆ, ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಲೇವಡಿ ಮಾಡಿದೆ.

ಹೌದು, ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, ನಾಡದ್ರೋಹಿ ಕನ್ನಡ ವಿರೋಧಿ ಕಾಂಗ್ರೆಸ್ ಸರ್ಕಾರದಿಂದ ಕನ್ನಡಕ್ಕೆ ಮತ್ತೊಂದು ಅನ್ಯಾಯ ಎಸಗಿದೆ ಎಂದು ಕಿಡಿಕಾರಿದೆ.

ಕರ್ನಾಟಕದ ಹೆಮ್ಮೆಯ ವರ್ಷದಲ್ಲಿ ಬೇಸರದ ವಿಚಾರ ನಮ್ಮ ಮುಂದಿದೆ. ಕರ್ನಾಟಕಕ್ಕೆ ಕಾಂಗ್ರೆಸ್‌ ಸರ್ಕಾರ ಅನ್ಯಾಯ ಮಾಡುತ್ತಿದೆ. ನಾಡ ದೇವಿಗೂ ಪ್ರತಿಮೆಯಿಲ್ಲ, ಭ್ರಷ್ಟಾಚಾರವಿಲ್ಲದ ಉತ್ಸವವಿಲ್ಲ. ದುಃಖದಿಂದಲೇ ಈ ವಿಡಿಯೋ ನಿಮ್ಮೆದುರು ಇಡುತ್ತಿದ್ದೇವೆ ಎಂದು ವಿಡಿಯೋ ಒಂದನ್ನು ಶೇರ್ ಮಾಡಿದೆ‌.

ಕನ್ನಡದ ಹೆಮ್ಮೆಯ ಹಂಪಿ ಉತ್ಸವವನ್ನು ಅನುದಾನದ ಕೊರತೆಯಿಂದ ರದ್ದುಗೊಳಿಸಿರುವ ಕಾಂಗ್ರೆಸ್, ಈಗ ಸಂಶೋಧನೆಗೆಂದೇ ಸ್ಥಾಪಿತವಾದ ಹಂಪಿ ವಿಶ್ವವಿದ್ಯಾಲಯಕ್ಕೂ ಸೂಕ್ತ ಅನುದಾನ ನೀಡದೆ, ತನ್ನ ಕನ್ನಡ ವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ IT ದಾಳಿ: ಈ ಬಾರಿ ಬಿಲ್ಡರ್​ಗಳೆ ಟಾರ್ಗೆಟ್​!

ಕರ್ನಾಟಕ ತನ್ನ ಇತಿಹಾಸದಲ್ಲಿಯೇ ಇಂತಹ ನಾಡ ವಿರೋಧಿ, ಕನ್ನಡ ದ್ರೋಹಿ ಮುಖ್ಯಮಂತ್ರಿಯನ್ನು ಕಂಡಿರಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.

Exit mobile version