Site icon PowerTV

ಪಟಾಕಿ ದಾಸ್ತಾನು ಮಳಿಗೆಗಳ ಪರಿಶೀಲನಾ ವರದಿ ಸಲ್ಲಿಸಿ : ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು : ಪಟಾಕಿ ದಾಸ್ತಾನು ಮಳಿಗೆಗಳ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಹಾಗೂ ಸ್ಪೋಟಕ ನಿಯಂತ್ರಣಾಧಿಕಾರಿಗಳಿಗೆ ಹೈಕೋರ್ಟ್ ಸೂಚಿಸಿದೆ.

ರಾಜ್ಯ ಸರ್ಕಾರ ಅಕ್ರಮ ಪಟಾಕಿ ದಾಸ್ತಾನಿಗೆ ಬ್ರೇಕ್​ ಹಾಕಿದ್ದು, ಅಕ್ರಮ ಮಳಿಗೆಗಳ ಮೇಲೆ ದಾಳಿ ಮಾಡಿ ಪಟಾಕಿ ಸೀಜ್​ ಮಾಡಿತ್ತು. ಇದನ್ನ ವಿರೋಧಿಸಿ ಪಟಾಕಿ ಮಾರಾಟಗಾರರು ಹೈಕೋರ್ಟ್​ ಮೆಟ್ಟಿಲೇರಿದ್ದರು.

ಇಂದು ಹೈಕೋರ್ಟ್​ ಪಟಾಕಿ ಮಾರಾಟಗಾರರು ಸಲ್ಲಿಸಿದ್ದ ರಿಟ್​ ಅರ್ಜಿ ವಿಚಾರಣೆ ನಡೆಸಿದೆ. ಸ್ಪೋಟಕಗಳ ಮುಖ್ಯ ನಿಯಂತ್ರಣಾಧಿಕಾರಿ ಅರ್ಜಿದಾರರ ದಾಸ್ತಾನು ಮಳಿಗೆಗಳ ತಪಾಸಣೆ ನಡೆಸಬೇಕು ಎಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಸೂಚಿಸಿದೆ.

ನ.6 ರೊಳಗೆ ವರದಿ ಸಲ್ಲಿಸುವಂತೆ ನಿರ್ದೇಶನ

ಪಟಾಕಿ ದಾಸ್ತಾನಿಗೆ ಅನುಸರಿಸಿರುವ ಸುರಕ್ಷತಾ ಕ್ರಮಗಳ ಬಗ್ಗೆಯೂ ಗಮನಿಸಬೇಕಿದೆ. ಇತ್ತೀಚೆಗೆ ನಡೆದ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಸ್ಪೋಟಕಗಳ ಮುಖ್ಯ ನಿಯಂತ್ರಣಾಧಿಕಾರಿ ಅರ್ಜಿದಾರರ ದಾಸ್ತಾನು ಮಳಿಗೆಗಳ ತಪಾಸಣೆ ನಡೆಸಬೇಕು. ಸರ್ಕಾರ, ಸ್ಪೋಟಕ ನಿಯಂತ್ರಣಾಧಿಕಾರಿಗಳು ಜಂಟಿ ಪರಿಶೀಲನೆ ನಡೆಸಬೇಕು.‌ ದಾಸ್ತಾನು ಕೇಂದ್ರಗಳ ಸುರಕ್ಷತೆ ಬಗ್ಗೆ ನವೆಂಬರ್ 6 ರೊಳಗೆ ಪರಿಶೀಲನಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ವರದಿ ಆಧರಿಸಿ ಹೈಕೋರ್ಟ್ ಮುಂದಿನ ಆದೇಶ ಹೊರಡಿಸುವ ಸಾಧ್ಯತೆ ಇದೆ.

Exit mobile version