Site icon PowerTV

ತಾಂತ್ರಿಕ ತೊಂದರೆಗಳಿಂದ ಸಿಗಂಧೂರು-ತುಮರಿ ಸೇತುವೆ ಕಾಮಗಾರಿ ವಿಳಂಬ : ಬಿ.ವೈ ಸಂಸದ ರಾಘವೇಂದ್ರ

ಶಿವಮೊಗ್ಗ : ಕೆಲವಾರು ತಾಂತ್ರಿಕ ತೊಂದರೆಗಳಿಂದ ಸಿಗಂದೂರು ತುಮುರಿ ಸೇತುವೆಯ ವಿಳಂಬವಾಗುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾಂತ್ರಿಕ ತೊಂದರೆಗಳಿಂದ ಎರಡು ತಿಂಗಳು ವಿಳಂಬವಾಗುವುದು ನಿಜ ಎಂದಿದ್ದಾರೆ.

ಪ್ರಕೃತಿಯ ಮತ್ತು ಹವಾಮಾನದ ವೈಪರಿತ್ಯದಿಂದಾಗಿ ಮಳೆ ಹೆಚ್ಚಿದ್ದರು, ಕಡಿಮೆ ಇದ್ದರೂ, ಆ ಪ್ರದೇಶದಲ್ಲಿ ಕಾಮಗಾರಿ ಸ್ವಲ್ಪ ಕಠಿಣವಾಗಿರುವುದರಿಂದ ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಲು ಆಗಿಲ್ಲ. ಲೋಕಸಭಾ ಚುನಾವಣೆಯ ಒಳಗೆ ಈ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಸಚಿವ ನಿತಿನ್‍ ಗಡ್ಕರಿ ರವರು ಈ ಸೇತುವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ವಿಐಎಸ್ಎಲ್ ಕಾರ್ಖಾನೆ ಶತಮಾನೋತ್ಸವ ಕಾರ್ಯಕ್ರಮಕ್ಕೆ ಅನೇಕ ಶ್ರೀಗಳು ಆಗಮಿಸುತ್ತಿದ್ದಾರೆ. ಐತಿಹಾಸಿಕ ಕಾರ್ಖಾನೆ ಸಾವಿರಾರು ಕಾರ್ಮಿಕರಿಗೆ ಅನ್ನ ನೀಡಿದೆ. ರಾಜ್ಯದಲ್ಲಿ ರೋಗಗ್ರಸ್ತ ಕಾರ್ಖಾನೆಯಾಗಿದ್ದ ವಿಐಎಸ್ಎಲ್ ಕಾರ್ಖಾನೆ ಇದೀಗ ಹಲವಾರು ಶ್ರೀಗಳ ಪಾದಾರ್ಪಣೆಯಿಂದಾಗಿ ಮತ್ತೆ ಪುನರಾರಂಭಕ್ಕೆ ಚೇತನ ಸಿಕ್ಕಿದ ಹಾಗಾಗಿದೆ ಎಂದು ಹೇಳಿದ್ದಾರೆ.

Exit mobile version