Site icon PowerTV

3ನೇ ಬಾರಿ ಅಮೆರಿಕಕ್ಕೆ ಹಾರಿದ ದರ್ಶನ್ ಪುಟ್ಟಣ್ಣಯ್ಯ : ಶಾಸಕರ ನಡೆಗೆ ಜನಾಕ್ರೋಶ

ಮಂಡ್ಯ : ಬರದ ನಡುವೆಯೂ ಮಂಡ್ಯ ಜಿಲ್ಲೆಯ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಗೆದ್ದ 5 ತಿಂಗಳಲ್ಲಿ ಮೂರನೇ ಬಾರಿ ಅಮೆರಿಕಕ್ಕೆ ಹಾರಿದ್ದು, ಶಾಸಕ ದರ್ಶನ್ ಪುಟ್ಟಣ್ಣಯ್ಯ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವಿಧಾನಸಭಾ ಚುನಾವಣೆ ವೇಳೆ ಅಮೆರಿಕಾದಲ್ಲಿರುವ ತನ್ನ ಕಂಪನಿ ಮಾರಿ ಹುಟ್ಟೂರಲ್ಲೇ ಇರುವುದಾಗಿ ಅವರು ಭರವಸೆ ನೀಡಿದ್ದರು. ಈ ಹಿಂದೆ ಹೋಗಿ ವಾಪಾಸ್ ಬಂದ ಬಳಿಕ ಕ್ಷೇತ್ರದ ಜನರ ಬಳಿ ಕ್ಷಮೆಯಾಚಿಸಿ ಮತ್ತೆ ವಿದೇಶಕ್ಕೆ ಹೋಗಲ್ಲ‌ ಎಂದಿದ್ದರು. ಆದರೆ, ಗೆದ್ದ ಕೆಲವೇ ತಿಂಗಳಲ್ಲಿ ಮತ್ತೆ ಅಮೆರಿಕಾಕ್ಕೆ ತೆರಳಿದ್ದಾರೆ.

ಕಳೆದ ಆಗಸ್ಟ್‌ನಲ್ಲೂ ವಿದೇಶಕ್ಕೆ ತೆರಳಿದ್ದ ದರ್ಶನ್ ಪುಟ್ಟಣ್ಣಯ್ಯ ಸ್ವಾತಂತ್ರ್ಯ ದಿನಾಚರಣೆಗೆ ಗೈರಾಗಿದ್ದರು. ಶಾಸಕರ ಅನುಪಸ್ಥಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆದಿತ್ತು. ಈಗ ಮತ್ತೆ ಒಂದು ವಾರದ ಹಿಂದೆ ಅಮೆರಿಕಾಕ್ಕೆ ಹೋಗಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕನ್ನಡ ರಾಜ್ಯೋತ್ಸವಕ್ಕೂ ಗೈರಾಗಿದ್ದಾರೆ. ಇನ್ನೂ, ದರ್ಶನ್ ಪುಟ್ಟಣ್ಣಯ್ಯ ಫಾರಿನ್​ನಲ್ಲೇ ಇರ್ತಾರೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.

Exit mobile version