Site icon PowerTV

ನಾಯಿ ಮೇಲೆ ಚಿರತೆ ದಾಳಿ; ಗ್ರಾಮಸ್ಥರು ಆತಂಕ!

ಮಂಡ್ಯ: ನಾಯಿ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಮೊಸಳೆಕೊಪ್ಪಲಿನಲ್ಲಿ ನಡೆದಿದೆ.

ಸುಮಾರು 12 ಸಾವಿರ ಬೆಲೆ ಬಾಳುವ ಜರ್ಮನ್ ಶೆಫರ್ಡ್ ತಳಿಯ ಸಾಕು ನಾಯಿಯ ಮೇಲೆ ಚಿರತೆ ದಾಳಿ ಮಾಡಿದೆ. ಗ್ರಾಮದ ನಿವಾಸಿ ನಾಗರಾಜು ಎಂಬುವವರಿಗೆ ನಾಯಿ ಸೇರಿದ್ದು, ಮನೆ ಪಕ್ಕದಲ್ಲಿರುವ ಪಶು ಸಾಕಾಣಿಕೆ ಶೆಡ್ಡಿನಲ್ಲಿ ಸಾಕು ನಾಯಿಯನ್ನು ಕಟ್ಟಲಾಗಿತ್ತು. ತಡರಾತ್ರಿ ಚಿರತೆ ದಾಳಿ ನಡಸಿ ತಲೆ ಬಿಟ್ಟು ದೇಹದ ಎಲ್ಲಾ ಭಾಗವನ್ನು ತಿಂದು ಹಾಕಿದೆ. ಅದೃಷ್ಟವಶಾತ್ ಶೆಡ್ಡಿನಲ್ಲಿ ಬೇರೆ ಯಾವುದೇ ಸಾಕು ಪ್ರಾಣಿಗಳನ್ನು ಕಟ್ಟದಿದ್ದ ಕಾರಣ ಅವುಗಳ ಪ್ರಾಣ ಉಳಿದಿದೆ.

ಇದನ್ನೂ ಓದಿ: ಹೈಕಮಾಂಡ್​ ಸೂಚಿಸಿದರೇ ನಾನೆ ಸಿಎಂ: ಸಚಿವ ಪ್ರಿಯಾಂಕ್​ ಖರ್ಗೆ!

ಗ್ರಾಮದ ಒಳಗೆ ನುಗ್ಗಿ ಚಿರತೆ ದಾಳಿ ಮಾಡಿರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಚಿರತೆಯನ್ನು ಸೆರೆ ಹಿಡಿಯುಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Exit mobile version