Site icon PowerTV

ಹೈಕಮಾಂಡ್​ ಸೂಚಿಸಿದರೇ ನಾನೆ ಸಿಎಂ: ಸಚಿವ ಪ್ರಿಯಾಂಕ್​ ಖರ್ಗೆ!

ಮೈಸೂರು : ಹೈಕಮಾಂಡ್​ ಸೂಚಿಸಿದರೇ ರಾಜ್ಯಕ್ಕೆ ನಾನೇ ಸಿಎಂ ಆಗುತ್ತೇನೆ ಎಂದು ಸಚಿವ ಪ್ರಿಯಾಂಕ್​ ಕರ್ಗೆ ತಿಳಿಸಿದ್ದಾರೆ.

ಸಿಎಂ ಅಧಿಕಾರ ಹಂಚಿಕೆ ವಿಚಾರವಾಗಿ ಮೈಸೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜಿಲ್ಲಾಪಂಚಾಯ್ತಿ ಸದಸ್ಯರಿಂದ ಹಿಡಿದು ಶಾಸಕರವರೆಗೂ ತಮ್ಮ ಅಭಿಪ್ರಾಯ ಹೇಳಿಕೊಳ್ಳುವ ಸ್ವತಂತ್ರ್ಯವಿದೆ. ಇದರಲ್ಲಿ ತಪ್ಪು ಏನು ಇಲ್ಲ. ಆದರೇ, ಅವರ ಹೇಳಿಕೆ, ಕಲ್ಲಿನ ಕೆತ್ತಿದ ಶಾಸನವಲ್ಲ ಎಲ್ಲವೂ ಪಕ್ಷದ ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು.

ಇದನ್ನೂ ಓದಿ: ಜಾನಪದ ನೃತ್ಯಕ್ಕೆ ಸಿಎಂ ಬಿಂದಾಸ್ ಸ್ಟೆಪ್ಸ್!

ಸಿಎಂ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತೇನು ಎಂದು ನೀಡಿರುವ ಹೇಳಿಕೆ ಅವರ ವಯಕ್ತಿಕ ಹೇಳಿಕೆ. ಸಿಎಂ ಯಾರಾಗಬೇಕು ಎನ್ನುವ ವಿಚಾರವನ್ನು ಹೈಕಮಾಂಡ್​ ನಿರ್ಧಾರಿಸುತ್ತದೆ. ಒಂದು ವೇಳೆ ಹೈಕಮಾಂಡ್​ ಸಿಎಂ ನೀನೇ ಆಗು ಅಂದರು ನಾನು ಸಿದ್ದನಿದ್ಧೇನೆ.

Exit mobile version