Site icon PowerTV

ಸಚಿವ ರಾಜಣ್ಣ ಹೇಳಿಕೆಗೆ ನಾನು ಆಭಾರಿ,ಅದೃಷ್ಟ ಬೇಗ ಕೂಡಿ ಬರಲಿ : ಗೃಹ ಸಚಿವ ಪರಮೇಶ್ವರ್

ತುಮಕೂರು: ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಕೆ ಎನ್ ರಾಜಣ್ಣ ಹೇಳಿಕೆಗೆ ನಾನು ಆಭಾರಿ ಆಗಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ವಸತಿಗೃಹಗಳ ಸಮುಚ್ಛಯ ಕಟ್ಟಡವನ್ನು ಉದ್ಘಾಟಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆ ಅದೃಷ್ಟ ಕೂಡಿ ಬರಲಿ ಅಂತ ನಾನು ಆಸೆ ಪಡ್ತೀನಿ. ಆ ಅದೃಷ್ಟ ಯಾವಾಗ ಕೂಡಿ ಬರುತ್ತೆ ಅಂತ ಹೇಳೋಕೆ ಆಗಲ್ಲ. ತುಮಕೂರಿನವರು ಅಲ್ವಾ ನೀವು. ನಮಗೆ ಒಳ್ಳೆದಾಗಬೇಕು ಅಂದ್ರೆ. ನನಗೆ ಸಪೊರ್ಟ್ ಮಾಡಿ ಎಂದು ಹೇಳಿದರು.

ಪರಮೇಶ್ವರ್ ಮನೆಯಲ್ಲಿ ಸಿಎಂ ಊಟದ ನೆಪದಲ್ಲಿ ಸಭೆ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಮನೆಯಲ್ಲಿ ಯಾವುದೇ ತರಹದ ಚರ್ಚೆ ಆಗಿಲ್ಲ. ಬಹಳಷ್ಟು ಅರ್ಹರು ಇದ್ದಾರೆ. ಎಲ್ಲರೂ ಒಂದೊಂದು ಚಾನ್ಸ್ ತೆಗೆದುಕೊಳ್ಳಲಿ ಬಿಡಿ ಎಂದರು.

 

 

Exit mobile version