Site icon PowerTV

ಸಿದ್ದರಾಮಯ್ಯ ಹೇಳಿದ್ದು ಸತ್ಯ ಅಂತಾ ನಾನು ಜಡ್ಜ್ ಮಾಡೋಕೆ ಆಗುತ್ತಾ? : ಸಚಿವ ಡಾ.ಜಿ. ಪರಮೇಶ್ವರ್

ಬೆಂಗಳೂರು: ಸಿಎಂ ಆಗಿ ನಾನೇ ಐದು ವರ್ಷ ಮುಂದುವೆಯುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿ ನೀಡಿದ್ದಾರೆ.

ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದರು ಇದರ ಬಗ್ಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇದರ ಬಗ್ಗೆ ನನಗೆ ಗೊತ್ತಿಲ್ಲ ಯಾವುದು ಸತ್ಯ, ಯಾವುದು ಅಸತ್ಯ ಎಂದು ವಿಷಯ ಗೊತ್ತಿಲ್ಲದ ಮೇಲೆ ನಾನು ವೈಯತ್ತಿಕಿವಾಗಿ ಜಡ್ಜ್‌ಮೆಂಟ್ ಮಾಡಲು ಸಾಧ್ಯವಿಲ್ಲ. ಇದೇ ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳು ಬಂದು ಹೋಗಿದ್ದಾರೆ ಬಹುಶಃ ಅವರಿಗೆ ಗೊತ್ತಿರುತ್ತೆ ಎಂದರು.

ದೆಹಲಿಯಲ್ಲಿ ಸರ್ಕಾರ ರಚನೆಯಾದಾಗ ಏನು ತೀರ್ಮಾನ ಮಾಡಿದ್ದಾರೆ ಗೊತ್ತಿಲ್ಲ. ಅದು ಗೊತ್ತಿರೋದು ಸಿಎಂ ಹಾಗೂ ಡಿಸಿಎಂಗೆ ಮಾತ್ರ, ಅವರಿಗೆ ಮಾತ್ರ ಎಲ್ಲಾ ಗೊತ್ತಿರೋದು ಎಂದು ತಿಳಿಸಿದರು.

ಇದನ್ನೂ ಓದಿ: ಅಲ್ಲೋಲ.. ಕಲ್ಲೋಲ..! 5 ವರ್ಷ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ : ಸಿದ್ದರಾಮಯ್ಯ

ಸಿಎಂ ಹೇಳಿಕೆ ರಾಜಕೀಯಕ್ಕೆ ಬಣಕ್ಕೆ  ಕಾರಣವಾಗುತ್ತಾ ಎಂಬ ವಿಚಾರವಾಗಿ ಏನು ಆಗಲ್ಲ ಅದರ ಬಗ್ಗೆ ಹೆಚ್ಚು ಚರ್ಚೆ ಮಾಡೋದು ಬೇಡ ಅನ್ನೋದು ನನ್ನ ಅನಿಸಿಕೆ. ನಾನಂತೂ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡೋದಕ್ಕೆ ಹೋಗಲ್ಲ ಎಂದರು.

ಡಿಕೆಶಿ ಒಂದೂವರೆ ವರ್ಷದ ಬಳಿಕ‌ ಸಿಎಂ ಆಗಬೇಕು ಎಂಬ ಶಾಸಕ ಇಕ್ಬಾಲ್‌ ಹುಸೇನ್ ಹೇಳಿಕೆ ವಿಚಾರವಾಗಿ ಅದೇ ನಾನು ಹೇಳ್ತಾ ಇರೋದು. ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನಾನು ಕೊಡೋದಕ್ಕೆ ಹೋಗಲ್ಲ ಎಂದು ಪರಮೇಶ್ವರ್  ಹೇಳಿದ್ದಾರೆ.

 

 

 

 

 

Exit mobile version