Site icon PowerTV

ಚೈತ್ರಾ ವಿರುದ್ಧದ ವಂಚನೆ ಪ್ರಕರಣ: ಸಿಸಿಬಿ ತನಿಖೆ ಪೂರ್ಣ!

ಬೆಂಗಳೂರು: ಉದ್ಯಮಿಗೆ ಬಿಜೆಪಿ ಟಿಕೆಟ್​​​​​ ನೀಡೋದಾಗಿ ಮಕ್ಮಲ್​ ಟೋಪಿ ಹಾಕಿದ ಚೈತ್ರಾ ಆ್ಯಂಡ್​ ಗ್ಯಾಂಗ್​​​​ ವಿರುದ್ಧದ ಪ್ರಕರಣದ ತನಿಖೆಯನ್ನು ಸಿಸಿಬಿ ಟೀಂ ಪೂರ್ಣಗೊಳಿಸಿದೆ.

ಆರೋಪಿಗಳ ವಿರುದ್ಧ ಸಿಸಿಬಿ ತಂಡ 68 ಸಾಕ್ಷ್ಯಗಳನ್ನ ಕಲೆ ಹಾಕಿದ್ದು ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿದೆ. ಮುಂದಿನ ವಾರ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ವಂಚನೆ ಪ್ರಕರಣದಲ್ಲಿ 4 ಕೋಟಿ 11 ಲಕ್ಷ ಹಣವನ್ನು ರಿಕವರಿ ಮಾಡಲಾಗಿದೆ.

ಇದನ್ನೂ ಓದಿ: ರೇಷನ್​ ಕಾರ್ಡ್​ ತಿದ್ದುಪಡಿಗೆ ಅವಕಾಶ ಕಲ್ಪಿಸಿದ ಆಹಾರ ಇಲಾಖೆ!

ಪ್ರಮುಖ ಆರೋಪಿ ಚೈತ್ರಾ, ಶ್ರೀಕಾಂತ್, ಗಗನ್ ಕಡೂರ್, ಹಾಲಶ್ರೀ ಮತ್ತು ಧನರಾಜ್ ಸೇರಿದಂತೆ 7 ಮಂದಿ ವಿರುದ್ಧ ಚಾರ್ಜ್ ಶೀಟ್​ ಹಾಕಲು ತಯಾರಿ ನಡೆದಿದೆ. ಆರೋಪಿಗಳ ಮೊಬೈಲ್ ಚಾಟ್ ಮತ್ತು ಕರೆಗಳ ಡೇಟಾ ರಿಟ್ರೀವ್ ಮಾಡಲಾಗಿದೆ. ಸದ್ಯ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನೂ ಯಾರಿಗೂ ಜಾಮೀನು ಸಿಗದೇ ಪರದಾಡುತ್ತಿದ್ದಾರೆ.

Exit mobile version