Site icon PowerTV

ಸಿರಾಜ್, ಶಮಿ ಬೆಂಕಿ ಬೌಲಿಂಗ್ : 16 ರನ್​ಗೆ ಶ್ರೀಲಂಕಾದ 6 ವಿಕೆಟ್ ಪತನ

ಬೆಂಗಳೂರು : ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತದ ಬೌಲರ್​ಗಳಾದ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ಲಂಕನ್ನರು ಕಂಗಾಲಾಗಿದ್ದಾರೆ.

358 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಲಂಕಾಗೆ ಇನ್ನಿಂಗ್ಸ್​ನ ಮೊದಲ ಓವರ್​ನ ಮೊದಲ ಎಸೆತದಲ್ಲೇ ಬುಮ್ರಾ ಅವರು ಪಾತುಮ್ ನಿಸಂಕಾ(0) ಅವರನ್ನು ಎಲ್​ಬಿಡಬ್ಲ್ಯೂ ಬಲೆಗೆ ಬೀಳಿಸಿದರು.

ಎರಡನೇ ಓವರ್​ ಬೌಲ್​ ಮಾಡಿದ ಮೊಹಮ್ಮದ್ ಸಿರಾಜ್ ಲಂಕಾಗೆ ಶಾಕ್ ನೀಡಿದರು. ಮೊದಲ ಎಸೆತದಲ್ಲೇ ದಿಮುತ್ ಕರುಣರತ್ನೆ (0) ಅವರನ್ನು ಎಲ್​ಬಿಡಬ್ಲ್ಯೂ ಮೂಲಕ ಔಟ್ ಮಾಡಿದರು. ಇದೇ ಓವರ್​ನ 5ನೇ ಎಸೆತದಲ್ಲಿ ಸದೀರ ಸಮರವಿಕ್ರಮ ಕೂಡ ಔಟಾದರು. ಸ್ಲಿಪ್​ನಲ್ಲಿ ಶ್ರೇಯಸ್ ಅಯ್ಯರ್​ಗೆ ಕ್ಯಾಚ್​ ನೀಡಿ ಪೆವಿಲಿಯನ್​ನತ್ತ ಮುಖಮಾಡಿದರು. ಮೇಡನ್ ಓವರ್ ಮಾಡಿ ಸಿರಾಜ್ 2 ವಿಕೆಟ್ ಕಬಳಿಸಿದರು.

ನಂತರ ನಾಲ್ಕನೇ ಓವರ್​ ಬೌಲ್ ಮಾಡಿದ ಮೊಹಮ್ಮದ್ ಸಿರಾಜ್ ಮೊದಲ ಎಸೆತದಲ್ಲೇ ಕುಸಾಲ್ ಮೆಂಡಿಸ್ (1) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.10ನೇ ಓವರ್ ಬೌಲ್ ಮಾಡಿದ ಮೊಹಮ್ಮದ್ ಶಮಿ ಮೂರನೇ ಎಸೆತದಲ್ಲಿ ಚರಿತ್ ಅಸಲಂಕಾ ಅವರು ರವೀಂದ್ರ ಜಡೇಜಾಗೆ ಕ್ಯಾಚ್ ನೀಡಿದ ಔಟಾದರು. 4ನೇ ಎಸೆತದಲ್ಲಿ ದಶುನ್ ಹೇಮಂತ (0) ಅವರು ಕೆ.ಎಲ್ ರಾಹುಲ್​ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್​ನತ್ತ ಹೆಜ್ಜೆ ಹಾಕಿದರು. ಮೊದಲ ಓವರ್​ನಲ್ಲಿಯೇ ಶಮಿ ಮೇಡನ್ ಮಾಡಿ 2 ವಿಕೆಟ್ ಕಬಳಿಸಿದರು.

Exit mobile version