Site icon PowerTV

ದೆಹಲಿ​ ಸಚಿವ ರಾಜ್​ಕುಮಾರ್​​ ಮನೆ ಮೇಲೆ ED ದಾಳಿ!

ದೆಹಲಿ : ಸಚಿವ ರಾಜ್​ಕುಮಾರ್ ಆನಂದ್​​ ಮನೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆ ದಾಳಿ ನಡೆಸಲಾಗಿದೆ. ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ನಾಯಕರು, ಶಾಸಕರು ಮತ್ತು ಸಚಿವರ ಮೇಲೆ ED ನಿರಂತರವಾಗಿ ದಾಳಿ ನಡೆಸುತ್ತಿದೆ. ದೆಹಲಿ ಸರ್ಕಾರದ ಹೆಚ್ಚಿನ ಸಚಿವರ ಮೇಲೆ ED ತನ್ನ ಹಿಡಿತವನ್ನು ಬಿಗಿಗೊಳಿಸಿದೆ.

ಇದನ್ನೂ ಓದಿ: ಚೈತ್ರಾ ವಿರುದ್ಧದ ವಂಚನೆ ಪ್ರಕರಣ: ಸಿಸಿಬಿ ತನಿಖೆ ಪೂರ್ಣ!

ED ತಂಡ ದೆಹಲಿ ಸರ್ಕಾರದ ಸಮಾಜ ಕಲ್ಯಾಣ ಸಚಿವ ರಾಜ್‌ಕುಮಾರ್ ಆನಂದ್ ಮನೆಯಲ್ಲಿ ಶೋಧ ಕಾರ್ಯ ನಡೆಸಿದೆ ಜೊತೆಗೆ ರಾಜ್‌ಕುಮಾರ್ ಆನಂದ್​ಗೆ ಸೇರಿದ 8 ರಿಂದ 9 ಸ್ಥಳಗಳಲ್ಲಿ ಹುಡುಕಾಟ ನಡೆಯುತ್ತಿದೆ.

Exit mobile version