Site icon PowerTV

ಬೆಂಗಳೂರಲ್ಲಿ ಯುವಕ ಕಿಡ್ನ್ಯಾಪ್​, ಹಾಸನದಲ್ಲಿ ಬಿಟ್ಟು ಎಸ್ಕೇಪ್​!

ಬೆಂಗಳೂರು: ಬೆಂಗಳೂರಿನಲ್ಲಿ ಬಾಲಕನ‌ನ್ನು ಕಿಡಿಗೇಡಿಗಳು ಕಿಡ್ನಾಪ್ ಮಾಡಿ ಹಾಸನದಲ್ಲಿ ಬಿಟ್ಟುಹೋಗಿರೋ ಘಟನೆ ನಡೆದಿದೆ.

ಯಲಹಂಕದ ಅನಂತಪುರ ಗೇಟ್​ ನಾಗಾರ್ಜುನ ಪಿಯು ಕಾಲೇಜು ವಿದ್ಯಾರ್ಥಿ ನಿನ್ನೆ ಬೆಳಿಗ್ಗೆ ಕಾಲೇಜಿಗೆ ತೆರಳುತ್ತಿದ್ದ. ಈ ವೇಳೆ ವಿಳಾಸ ಕೇಳೋ ನೆಪದಲ್ಲಿ ಬಂದು ಪ್ರಜ್ಞೆ ತಪ್ಪಿಸಿ ಕಿಡ್ನ್ಯಾಪ್ ಮಾಡಿದ್ದಾರೆ. ಎಚ್ಚರಗೊಂಡಾಗ ಹಾಸನ ಜಿಲ್ಲೆಯ ಅರಕಲಗೂಡು ಸಮೀಪದಲ್ಲಿದಿದ್ದನ್ನು ಕಂಡು ಯುವಕ ಶಾಕ್​​​ ಆಗಿದ್ದಾನೆ. ಬಳಿಕ ಸಮೀಪದ ಮನೆ ಬಳಿ ತೆರಳಿ ಪೋಷಕರಿಗೆ ಫೋನ್ ಮಾಡಿದ್ದಾನೆ. ಕೂಡಲೆ ಪೋಷಕರು ಹಾಸನಕ್ಕೆ ಬಂದು ಮಗನನ್ನ ಅಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಇಂದು ಚಾಲನೆ!

ಈ ಸಂಬಂಧ ಬೆಂಗಳೂರಿನ ಯಲಹಂಕ‌ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಯಾರು ಯಾವ ಕಾರಣಕ್ಕೆ ಕಿಡ್ನ್ಯಾಪ್ ಮಾಡಿದ್ದಾರೆ ಅನ್ನೋ ಬಗ್ಗೆ ತನಿಖೆ ನಡೆಸುವಂತೆ ಪೋಷಕರು ಒತ್ತಾಯಿಸಿದ್ದಾರೆ. ಹಾಸನದ ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version