Site icon PowerTV

ಗ್ರಾಮ ಪಂಚಾಯಿತಿ ಸದಸ್ಯನಿಗೆ ಧಮ್ಕಿ: ದೂರು ದಾಖಲು!

ಮೈಸೂರು: ನಂಜನಗೂಡು ತಾಲೂಕಿನ ಹಾಡ್ಯಾ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಡಿಕೆಹುಂಡಿ ಕೃಷ್ಣ ಎಂಬುವವರ ಕತ್ತಿನಪಟ್ಟಿ ಹಿಡಿದು ಮಾಜಿ ಅಧ್ಯಕ್ಷೆಯ ಬೆಂಬಲಿಗ ಧಮ್ಕಿ ಹಾಕಿರುವ ಘಟನೆ ನಡೆದಿದೆ.

ಬಿಜೆಪಿ ಬೆಂಬಲಿತ ಮಾಜಿ ಅಧ್ಯಕ್ಷೆ ಬೆಂಬಲಿಗರಾದ ಚೆನ್ನಯ್ಯ ಮಹದೇವ ಹಲ್ಲೆ ನಡೆಸಿದ ವ್ಯಕ್ತಿ, ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗೆ ತೆರಳುತ್ತಿದ್ದ ಸದಸ್ಯ ಮಡಿಕೆಹುಂಡಿ ಕೃಷ್ಣನ ಮೇಲೆ ಅಟ್ಯಾಕ್​ ಮಾಡಿ ಕಿರಿಕ್​ ಮಾಡಿದ್ದಾನೆ. ನೀನು ಸಾಮಾನ್ಯ ಸಭೆಗೆ ಹಾಜರಾಗಬಾರದೆಂದು ಧಮ್ಕಿ ಹಾಕಿದ್ದಾನೆ.

ಇದನ್ನೂ ಓದಿ: 68ನೇ ಕನ್ನಡ ರಾಜ್ಯೋತ್ಸವ: ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಸಚಿವ ಮುನಿಯಪ್ಪ

ಬಿಜೆಪಿ ಬೆಂಬಲಿತ ಮಡಿಕೆಹುಂಡಿ ಕೃಷ್ಣ, ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬೆಂಬಲ ಸೂಚಿಸಿದ್ದರು. ಇದರಿಂದ ಬಿಜೆಪಿ ಬೆಂಬಲಿತರಿಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿತ್ತು. ದ್ವೇಷ ಬೆಳೆಸಿಕೊಂಡ ಬಿಜೆಪಿ ಬೆಂಬಲಿತ ಮಾಜಿ ಅಧ್ಯಕ್ಷೆ ಬೆಂಬಲಿಗರಾದ ಚೆನ್ನಯ್ಯ ಮಹದೇವ ಕಿರಿಕ್​ ಶುರು ಮಾಡಿದ್ದಾನೆ. ಈ ಸಂಬಂಧ ಗ್ರಾಮ ಪಂಚಾಯಿತಿ ಸದಸ್ಯ ಮಡಿಕೆಹುಂಡಿ ಕೃಷ್ಣ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾನೆ.

Exit mobile version