Site icon PowerTV

ಅತ್ಯಾಚಾರಕ್ಕೆ ವಿರೋಧ; ತಾಯಿಯನ್ನೇ ಕೊಂದ ಪಾಪಿ ಮಗ!

ದಕ್ಷಿಣ ಕನ್ನಡ: ಅತ್ಯಾಚಾರಕ್ಕೆ ವಿರೋಧಿಸಿದ ತಾಯಿಯನ್ನೇ ಕಡುಪಾಪಿ ಮಗ ಕೊಂದಿರುವ ಅತೀ ವಿಕೃತ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿ ತಾಲೂಕಿನ ಕೊಂಡೇಲಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೊಂಡೇಲಾ ಗ್ರಾಮದ ದುರ್ಗಾನಗರ ನಿವಾಸಿ ರತ್ನ ಶೆಟ್ಟಿ ಮೃತರು, ರವಿರಾಜ್ ಶೆಟ್ಟಿ ಆರೋಪಿ. ಅ. 26ರ ರಾತ್ರಿ ನಡೆದ ಘಟನೆ ಮೂರು ದಿನಗಳ ಬಳಿಕ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೆ ಒಪ್ಪದ ಹಿನ್ನೆಲೆಯಲ್ಲಿ ತಾಯಿಯನ್ನು ಮಗ ಕತ್ತು ಹಿಸುಕಿ ಕೊಂದಿದ್ದು, ಬಳಿಕ ಮನೆಗೆ ಬೀಗ ಜಡಿದು ಪರಾರಿಯಾಗಿದ್ದ. ಮೂರು ದಿನಗಳ ಬಳಿಕ ಮೃತದೇಹಕ್ಕೆ ನೊಣಗಳು ಮುತ್ತಿಕೊಂಡು ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಯುವನಿಧಿ ಜಾರಿಗೆ ಮುಹೂರ್ತ ಫಿಕ್ಸ್ : ಯುವಜನತೆಗೆ ಗುಡ್​ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಸೋಮವಾರ ಸಂಜೆ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ತಾಯಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದೆ, ಆಕೆ ಒಪ್ಪದ ಹಿನ್ನೆಲೆಯಲ್ಲಿ ಕೊಂದಿದ್ದಾಗಿ ಮಗ ಹೇಳಿದ್ದಾನೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Exit mobile version