Site icon PowerTV

ರಮೇಶ್ ಜಾರಕಿಹೊಳಿ ತಾಕತ್ ಇದ್ರೆ ಸಾಕ್ಷಿ ಕೊಡಲಿ : ಡಾ.ಜಿ. ಪರಮೇಶ್ವರ್ ಸವಾಲು

ತುಮಕೂರು : ಮಾಜಿ ಸಚಿವ ರಮೇಶ್​ ಜಾರಕಿಹೊಳಿ ತಾಕತ್​​​​​ ಇದ್ರೆ ಸಾಕ್ಷಿ ಕೊಡಲಿ. ಸಾಕ್ಷಿ ಕೊಟ್ಟ ಮೇಲೆ ನಾವು ನ್ಯಾಯನೇ ಕೊಡಿಸೋದು, ಅನ್ಯಾಯ ಕೊಡೋದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್​​​​​ ಸವಾಲು ಹಾಕಿದ್ದಾರೆ.

ಆಪರೇಷನ್ ಕಮಲದ ವಿಚಾರ ಕುರಿತು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಸುಭದ್ರವಾಗಿದೆ. 135 ಶಾಸಕರನ್ನ ಆರಿಸಿ ಕಳುಹಿಸಿದ್ದಾರೆ. ನಾವು ರಾಜ್ಯದ ಜನತೆಗೆ ಒಳ್ಳೆಯ ಆಡಳಿತ ಕೊಡ್ತಿದ್ದೇವೆ‌. ಪ್ರತಿಪಕ್ಷದವರು ಟೀಕೆ ಮಾಡ್ತಾರೆ ಮಾಡಲಿ. ನಾನು ಅವರಲ್ಲಿ ಮನವಿ ಮಾಡೋದು ಏನು ಅಂದ್ರೆ ಧನಾತ್ಮಕ ಟೀಕೆಗಳನ್ನ ಮಾಡಿ. ಸಲಹೆ, ಸೂಚನೆಗಳನ್ನ ಕೊಡಿ, ನಾವು ಅದನ್ನ ಸ್ವೀಕಾರ ಮಾಡ್ತೀವಿ ಎಂದು ಹೇಳಿದ್ದಾರೆ.

ನಾವು ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವಾಗ ಮಹಾರಾಷ್ಟ್ರದವರು ಕರಾಳ ದಿನವನ್ನ ಆಚರಣೆ ಮಾಡ್ತಾರೆ. ಇಂದು ಬೆಳಗಾವಿ, ಬೀದರ್​​ ಮತ್ತು ಗುಲಬರ್ಗಾದಲ್ಲಿ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಮಂತ್ರಿ ಆಗಿದ್ರು ಅರೆಸ್ಟ್ ಮಾಡ್ತೀವಿ

ಈ ಸಂದರ್ಭದಲ್ಲಿ ಮರಾಠಿ ಮುಖಂಡರು ನಮ್ಮ ಕರ್ನಾಟಕದ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿ ಮಾಡ್ತಾರೆ. ಅದು ಒಂದು ವೇಳೆ ಗಡಿಯನ್ನ ದಾಟಿ ಬಂದು ರಾಜ್ಯದಲ್ಲಿ ಆ ರೀತಿಯ ಭಾಷಣ ಮಾಡಿದ್ರೆ ತಕ್ಷಣ ಅವರನ್ನ ಅರೆಸ್ಟ್ ಮಾಡ್ತೀವಿ. ಅವರು ಯಾರೆ ಆಗಿರಲಿ, ಎಷ್ಟು ದೊಡ್ಡವರೇ ಆಗಿರಲಿ ಮಂತ್ರಿ ಆಗಿದ್ರು ಅರೆಸ್ಟ್ ಮಾಡ್ತೀವಿ. ಈ ಬಗ್ಗೆ ನಾನು ಈಗಾಗಲೇ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

Exit mobile version