Site icon PowerTV

ಡಿ.ಕೆ ಶಿವಕುಮಾರ್ ಸಿಎಂ ಆಗೋದಕ್ಕೆ ಅರ್ಹರಾಗಿದ್ದಾರೆ : ಕೆ.ಎನ್. ರಾಜಣ್ಣ

ಹಾಸನ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗೋದಕ್ಕೆ ಅರ್ಹರಾಗಿದ್ದಾರೆ. ಆದ್ರೆ, ನಮ್ಮ ರಾಜ್ಯದಲ್ಲಿ 5 ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎನ್ನುವುದು ಬಹುಜನರ ಬಯಕೆ ಎಂದು ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್​​​ ಸಿಎಂ ಆಗಬೇಕು ಅನ್ನೋದರಲ್ಲಿ ತಪ್ಪೇನಿದೆ? ಮುಖ್ಯಮಂತ್ರಿ ಆಗುವಂತಹ ಅರ್ಹತೆ ಶಿವಕುಮಾರ್‌ಗೂ ಕೂಡ ಇದೆ ಎಂದು ಹೇಳಿದ್ದಾರೆ.

ಮನುಷ್ಯರ ಅನಿಸಿಕೆಗಳು ಇದ್ದೇ ಇರುತ್ತೆ. ಒಬ್ಬೊಬ್ಬರಿಗೆ ಒಂದೊಂದು ಹುದ್ದೆಯಲ್ಲಿ ಆಸೆ ಜಾಸ್ತಿ ಇರಬಹುದು, ಒಂದರಲ್ಲಿ ಕಡಿಮೆ ಇರಬಹುದು. ಹಾಗಾಗಿ ಅವರು ಹೇಳೋದ್ರಲ್ಲಿ ತಪ್ಪೇನಿಲ್ಲ. ಮುಖ್ಯಮಂತ್ರಿ ಆಗಲು ಶಿವಕುಮಾರ್‌ಗೂ ಕೂಡ ಎಲ್ಲಾ ಅರ್ಹತೆ ಇದೆ. ಅವರು ಒಳ್ಳೆಯ ಸಂಘಟನೆ ಮಾಡ್ತಾರೆ. ಮೊದಲಿನಿಂದಲೂ ಪಕ್ಷದಲ್ಲಿ ನಿಷ್ಠಾವಂತರಿದ್ದಾರೆ ಎಂದು ಡಿಕೆಶಿ ಹಾಡಿ ಹೊಗಳಿದ್ದಾರೆ.

Exit mobile version