Site icon PowerTV

ಕೊನೆಗೂ ಬಲೆಗೆ ಬಿದ್ದೇ ಬಿಡ್ತು ಕಿಲ್ಲರ್ ಚಿರತೆ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಹಿಂದೆ ಕಾಣಿಸಿಕೊಂಡಿದ್ದ ಚಿರತೆ ಕೊನೆಗೂ ಬಲೆಗೆ ಬಿದ್ದಿದೆ. ಇದರಿಂದ ರಾಜಧಾನಿ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ.

ಅಪಾರ್ಟ್ಮೆಂಟ್​ ವೊಂದರಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಲವು ಕಡೆಗಳಲ್ಲಿ ಬೋನ್ ಇಟ್ಟಿದ್ದರು. ಇದೀಗ ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇಟ್ಟಿದ್ದ ಬಲೆಗೆ ಬಿದ್ದಿದೆ.

ಸದ್ಉ ಚಿರತೆಯಮ್ಮು ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯದಲ್ಲಿ ಬಿಡಲು ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ.

Exit mobile version