Site icon PowerTV

ಬಿಟ್ಟಿ ಭಾಗ್ಯ ಸರಿಯಾಗಿ ಕೊಡದ, ನಿಮ್ಮದು ನುಡಿದಂತೆ ನಡೆಯುವ ಸರ್ಕಾರವೇ? : ಬಿ.ವೈ ವಿಜಯೇಂದ್ರ

ಬೆಂಗಳೂರು : ಸರಣಿ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಜೆಪಿ ಶಾಸಕ ಬಿ.ವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸುವ ಸಿಎಂ ಸಿದ್ದರಾಮಯ್ಯ ಅವರೇ.. ಬಿಟ್ಟಿ ಭಾಗ್ಯಗಳನ್ನೂ ಸರಿಯಾಗಿ ಕೊಡಲಾಗದ, ಅಭಿವೃದ್ಧಿ ಕಡೆ ಒಂದೇ ಒಂದು ಹಜ್ಜೆಯನ್ನೂ ಇಡಲಾಗದ ನಿಮ್ಮದು ನುಡಿದಂತೆ ನಡೆಯುವ ಸರಕಾರ ಹೇಗಾಗುತ್ತದೆ? ಎಂದು ಕಿಡಿಕಾರಿದ್ದಾರೆ.

ನಮ್ಮ ಪ್ರಶ್ನೆಗೆ ಉತ್ತರಿಸಿ, ಲೆಕ್ಕಕೊಡಿ. ಪ್ರದಾನಿ ಮೋದಿ ಅವರ ಸರ್ಕಾರ ಕೊಡಮಾಡುತ್ತಿರುವ ಉಚಿತ 5 ಕೆಜಿ ಅಕ್ಕಿ ಹಾಗೂ ನೀವೇ ಘೋಷಿಸಿದ ಅನ್ನ ಭಾಗ್ಯದ 10 ಕೆಜಿ ಸೇರಿಸಿ ಒಟ್ಟು 15 ಕೆಜಿ ಅಕ್ಕಿ ನೀಡಬೇಕಾಗಿತ್ತಲ್ಲವೇ? 10 ಕೆಜಿ ಬದಲು 5 ಕೆಜಿ ಅಕ್ಕಿಯನ್ನಾದರೂ ನೀಡುತ್ತಿದ್ದೀರಾ? ಅಕ್ಕಿ ಬದಲು ಹಣ ಎಂದಿರಿ. ಈಗ ಹಣವೂ ಇಲ್ಲ ಅಕ್ಕಿಯೂ ಇಲ್ಲ ಎಂಬಂತಾಗಿದೆ ಏಕೆ? ಕೇಂದ್ರ ಕೊಡುವ 5 ಕೆಜಿ ಅಕ್ಕಿಯಲ್ಲೂ 2 ಕೆಜಿಗೆ ಕತ್ತರಿ ಹಾಕ್ತಿದ್ದೀರಲ್ಲ ಏಕೆ? ಎಂದು ಆಕ್ರೋಶ ಹೊರಹಾಕಿದ್ದಾರೆ.

Exit mobile version