Site icon PowerTV

ರಜನಿಕಾಂತ್ ಮತ್ತು ನಾನು ಮದುವೆಯಾಗಿದ್ದೆವು : ನಟಿ ಕವಿತಾ ಶಾಕಿಂಗ್ ಹೇಳಿಕೆ

ಬೆಂಗಳೂರು : ನಟ ರಜನಿಕಾಂತ್ ಅವರು ನನ್ನನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ನಟಿ ಕವಿತಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಯೂಟ್ಯೂಬ್ ಚಾನೆಲ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಜನಿಕಾಂತ್ ಜೊತೆಗಿನ ಗಾಸಿಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ರಜನಿಕಾಂತ್ ಅವರ ಜೊತೆ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರಿಸುತ್ತಿದ್ದಾಗ ಇಬ್ಬರೂ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದವು. ಮೋಹನ್‌ ಬಾಬು ಜೊತೆ ಸಿನಿಮಾದಲ್ಲಿ ನಟಿಸುವಾಗ ಈ ವಿಷಯ ತಿಳಿಯಿತು. ಈ ಸುದ್ದಿ ತಿಳಿದು ಕೋಪಗೊಂಡು ಮೋಹನ್ ಬಾಬು ಅವರ ಸಿನಿ ಜರ್ನಿ ಮೇಲೆ ಪರಿಣಾಮ ಬೀರುತ್ತದೆ ಎಂದು ಶೂಟಿಂಗ್ ನಿಲ್ಲಿಸಿದೆ ಎಂದಿದ್ದಾರೆ.

ರಜನಿಕಾಂತ್ ಜೊತೆ ನನ್ನ ಮದುವೆ ಆಗಿದೆ

ಈ ರೀತಿ ಸುದ್ದಿ ಪ್ರಕಟಿಸಿದ್ದ ಪತ್ರಿಕಾ ಕಚೇರಿಗೆ ಹೋಗಿ ಜಗಳವಾಡಿದ್ದೆ. ಬಳಿಕ ಪತ್ರಿಕೆಯವರು ಸ್ಪಷ್ಟೀಕರಣ ನೀಡುವುದಾಗಿ ಹೇಳಿದ್ದರು. ಆ ಬಳಿಕವಷ್ಟೇ ಈ ವದಂತಿ ಅಂತ್ಯಗೊಂಡಿತ್ತು. ಆ ಸಂದರ್ಭದಲ್ಲಿ ನಟ ರಜನಿಕಾಂತ್ ಜೊತೆ ನನ್ನ ಮದುವೆ ಆಗಿದೆ ಎಂಬ ಸುದ್ದಿ ವ್ಯಾಪಕವಾಗಿ ಹಬ್ಬಿತ್ತು ಎಂದು ನಟಿ ಕವಿತಾ ಹೇಳಿಕೊಂಡಿದ್ದಾರೆ.

Exit mobile version