Site icon PowerTV

ಬೆಳ್ಳಂಬೆಳಗ್ಗೆ ಬೆಂಗಳೂರಿನ 11 ಕಡೆ ಲೋಕಾಯುಕ್ತ ದಾಳಿ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ 11 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಾರ್ಮಿಕ ಇಲಾಖೆ ಡೆಪ್ಯೂಟಿ ಡೈರೆಕ್ಟರ್ ಶ್ರೀನಿವಾಸ್ ಮನೆ ಮೇಲೆ ದಾಳಿಯಾಗಿದೆ. ಬೆಂಗಳೂರು ಹಾಗೂ ಕೊಳ್ಳೆಗಾಲ ಮನೆ ಮೇಲೆ ದಾಳಿ ಮಾಡಿದ್ದಾರೆ. ಶ್ರೀನಿವಾಸ್​ಗೆ ಸಂಬಂಧಿಸಿದ ಮೂರು ಕಡೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಚಂದ್ರಪ್ಪ ಬೀರಜ್ಜನವರ್, ಅಸಿಸ್ಟೆಂಟ್ ರೆವಿನ್ಯೂ ಅಫೀಸರ್ ಮನೆ ಮೇಲೂ ದಾಳಿಯಾಗಿದ್ದು, ಹೆಗ್ಗನಹಳ್ಳಿ ವಾರ್ಡ್, R.R. ನಗರ ವಲಯ, K.R.ಪುರದ ನಿವಾಸದ ಮೇಲೆ ದಾಳಿಯಾಗಿದೆ. ಚಂದ್ರಪ್ಪಗೆ ಸೇರಿದ ಮೂರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧಕಾರ್ಯಕೈಗೊಂಡಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಮಾಹಿತಿ ಹಿನ್ನೆಲೆ ದಾಳಿಯಾಗಿದೆ. ಚಂದ್ರಪ್ಪ ಬೀರಜ್ಜನವರ್​ಗೆ ಸಂಬಂಧಿಸಿದ ಮೂರು ಕಡೆಗಳಲ್ಲಿ ದಾಳಿ ಮಾಡಲಾಗಿದೆ.

ಯೋಜನಾ ನಿರ್ದೇಶಕನ ಮನೆ ಮೇಲೆ ದಾಳಿ

ರಾಯಚೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಿರ್ಮಿತಿ ಕೇಂದ್ರ , ಕ್ಯಾಷೋಟೆಕ್ ಯೋಜನಾ ನಿರ್ದೇಶಕ ಶರಣಬಸವ ಪಟ್ಟೇದ್​ ಮನೆ ಮೇಲೆ ದಾಳಿಯಾಗಿದೆ. ನಗರದ ಗಂಗಾಪರಮೇಶ್ವರಿ ಕಾಲೋನಿಯಲ್ಲಿನ ಮನೆ ಸೇರಿ ನಾಲ್ಕು ಕಡೆ ದಾಳಿಯಾಗಿದೆ.

ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆ ಮೇಲೆ ದಾಳಿಯಾಗಿದೆ. ಏಕಕಾಲಕ್ಕೆ ನಾಲ್ಕು ಕಡೆ ದಾಳಿ ಮಾಡಲಾಗಿದೆ. ಲಿಂಗಸುಗೂರಿನಲ್ಲಿನ ಜಮೀನು ಸೇರಿದಂತೆ ಆಸ್ತಿಗಳ ಪರಿಶೀಲನೆ ನಡೆಸಲಾಗುತ್ತದೆ. ರಾಯಚೂರು ಲೋಕಾಯುಕ್ತ SP ಡಾ.ಅರಸಿದ್ದಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

Exit mobile version