Site icon PowerTV

SL vs AFG : ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಅಫ್ಘಾನಿಸ್ತಾನ ಬೌಲಿಂಗ್ ಆಯ್ಕೆ

ಬೆಂಗಳೂರು : ವಿಶ್ವಕಪ್‌-2023 ಟೂರ್ನಿಯಲ್ಲಿ ಇಂದು ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗಲಿದ್ದು, ಟಾಸ್​ ಗೆದ್ದಿರುವ ಅಫ್ಘಾನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಪುಣೆಯ ಮಹರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಈ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿರಲಿದೆ. ಬಲಿಷ್ಠ ಇಂಗ್ಲೆಂಡ್ ಹಾಗೂ ಮತ್ತು ಪಾಕಿಸ್ತಾನ ತಂಡಗಳನ್ನೇ ಮಣಿಸಿರುವ ಅಫ್ಘಾನಿಸ್ತಾನ ಶ್ರೀಲಂಕಾಗೂ ಬಿಗ್​ ಶಾಕ್ ಕೊಡುವ ತವಕದಲ್ಲಿದೆ.

ಲಂಕಾ ಹಾಗೂ ಅಫ್ಘಾನ್ ಈವರೆಗೆ ತಲಾ 2 ಪಂದ್ಯಗಳನ್ನು ಗೆದ್ದಿವೆ. ಉತ್ತಮ ನೆಟ್​ ರನ್ ರೇಟ್‌ನಿಂದಾಗಿ ಶ್ರೀಲಂಕಾ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನ ತಂಡ 7ನೇ ಸ್ಥಾನದಲ್ಲಿದೆ. ಇಂದು ಗೆಲುವು ಜಯ ಗಳಿಸಿದ ತಂಡವು 6 ಅಂಕಗಳೊಂದಿಗೆ ಸೆಮಿಫೈನಲ್​ಗೆ ಇನ್ನಷ್ಟು ಹತ್ತಿರವಾಗಲಿದೆ. ಸೋತ ತಂಡಕ್ಕೆ ಸೆಮಿಸ್ ಹಾದಿ ಮತ್ತಷ್ಟು ಕಠಿಣವಾಗಲಿದೆ.

ಶ್ರೀಲಂಕಾ ತಂಡ

ಕುಸಲ್ ಮೆಂಡಿಸ್ (ನಾಯಕ) ಪಾತುಮ್ ನಿಸಂಕ, ಕುಸಾಲ್ ಪೆರೇರಾ, ಸದಿರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ್ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೇಶ್ ತಿಕ್ಷಣ, ಕಸುನ್ ರಜಿತಾ, ದುಷ್ಮಂತ ಚಮೀರಾ, ದಿಲ್ಶನ್ ಮಧುಶಂಕ

ಅಫ್ಘಾನಿಸ್ತಾನ ತಂಡ

ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಹಮತ್ ಷಾ, ಅಜ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್, ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಝಲ್ಹಕ್ ಫಾರೂಖಿ

Exit mobile version