Site icon PowerTV

ರಾಹುಲ್, ಪ್ರಿಯಾಂಕಾ ಬೇರುಗಳು ಇಟಲಿಯಿಂದ ಬಂದಿವೆ : ಅಮಿತ್ ಶಾ

ಮಧ್ಯಪ್ರದೇಶ : ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಬೇರುಗಳು ಇಟಲಿಯಿಂದ ಬಂದಿವೆಯೇ ಹೊರತು ಭಾರತದಿಂದಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಮಧ್ಯಪ್ರದೇಶದ ಚಿಂದ್ವಾರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲೆಡೆ ಜನರು ಭಾರತದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆ. ದೇಶವನ್ನು ಹೊಗಳಲಾಗುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಮಟ್ಟದ್ದಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ಸಕಾರಾತ್ಮಕ ಸಂಗತಿಗಳು ಕಾಣಿಸುತ್ತಿಲ್ಲ. ಈ ಸಹೋದರ ಮತ್ತು ಸಹೋದರಿ ದೇಶಾದ್ಯಂತ ತಿರುಗಾಡುತ್ತಲೇ ಇರುತ್ತಾರೆ. ಮತ್ತೆ ಏನಾಯಿತು ಎಂದು ಕೇಳುತ್ತಲೇ ಇರುತ್ತಾರೆ. ಅವರಿಗೆ ಅರ್ಥವಾಗುವುದಿಲ್ಲ. ಏಕೆಂದರೆ ಅವರ ಬೇರುಗಳು ಇಟಲಿಯಿಂದ ಬಂದವು ಭಾರತದಿಂದಲ್ಲ ಎಂದು ಅಮಿತ್​ ಶಾ ಲೇವಡಿ ಮಾಡಿದ್ದಾರೆ.

ದಿಗ್ವಿಜಯ್ ಕೆನ್ನೆಗೆ ಬಾರಿಸಲಾಗುತ್ತದೆ

ಮಧ್ಯಪ್ರದೇಶವು 3 ಕುಟುಂಬಗಳ ಪ್ರಾಬಲ್ಯವನ್ನು ಹೊಂದಿದೆ. ಗಾಂಧಿ ಕುಟುಂಬ, ಕಮಲನಾಥ್ ಕುಟುಂಬ ಹಾಗೂ ದಿಗ್ವಿಜಯ್ ಕುಟುಂಬ. ಮೂರು ತಿಗರುಗಳಿರುವ ಕಡೆ ಕೆಲಸ ಹಾಳಾಗುತ್ತದೆ. ಇಲ್ಲಿ ಗಾಂಧಿ ಕುಟುಂಬದಿಂದ ಆದೇಶಗಳು ಅನುಸರಿಸುತ್ತವೆ, ಕಮಲ್ ನಾಥ್ ಅವರಿಂದ ಸೂಚನೆಗಳು ಅನುಸರಿಸುತ್ತವೆ ಮತ್ತು ತಪ್ಪಾದಾಗ ದಿಗ್ವಿಜಯ್ ಕೆನ್ನೆಗೆ ಬಾರಿಸಲಾಗುತ್ತದೆ. ಆದ್ದರಿಂದಲೇ ಇಂದು ಕಮಲ್‌ನಾಥ್‌ ಮತ್ತು ದಿಗ್ವಿಜಯ್‌ ಜನ ಪರಸ್ಪರ ಬಟ್ಟೆ ಹರಿದುಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಕುಟುಕಿದ್ದಾರೆ.

Exit mobile version