Site icon PowerTV

M.ಲಕ್ಷ್ಮಣ್‌ಗೆ HDK ಅಭಿಮಾನಿಗಳಿಂದ ಬೆದರಿಕೆ ಕರೆ!

ಬೆಂಗಳೂರು: JDS ಕಾರ್ಯಕರ್ತನೋರ್ವ ಕಾಂಗ್ರೆಸ್ ವಕ್ತಾರರಿಗೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. KPCC ವಕ್ತಾರ ಎಂ.ಲಕ್ಷ್ಮಣ್​​​ಗೆ ಮಾಜಿ ಮುಖ್ಯಮಂತ್ರಿ H.D.ಕುಮಾರಸ್ವಾಮಿ ಅಭಿಮಾನಿಗಳು ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

KPCC ವಕ್ತಾರ ಎಂ.ಲಕ್ಷ್ಮಣ್‌ ಅವರಿಗೆ ಜೆಡಿಎಸ್ ಕಾರ್ಯಕರ್ತನೊಬ್ಬ ಆವಾಜ್ ಹಾಕಿದ ಆಡಿಯೋ ವೈರಲ್ ಆಗಿದೆ. ದೂರವಾಣಿ ಕರೆಯಲ್ಲಿ ಕುಮಾರಸ್ವಾಮಿ ಬಗ್ಗೆ ಮಾತನಾಡದಂತೆ ಆವಾಜ್ ಹಾಕಲಾಗಿದೆ. ಈ ಸಂಬಂಧ HDK ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಎಂ.ಲಕ್ಷ್ಮಣ್‌ ದೂರು ನೀಡಿದ್ದಾರೆ. ಬೆದರಿಕೆ ಹಾಕಿ, ನಮ್ಮ ಮನೆಗೆ ಮುತ್ತಿಗೆ ಹಾಕಲು ಮತ್ತು ಒಂಟಿಯಾಗಿದ್ದಾಗ ಅಟ್ಯಾಕ್ ಮಾಡುತ್ತೇವೆಂದಿದ್ದಾರೆ ಎಂದು M.ಲಕ್ಷ್ಮಣ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: 2 ನೇ ದಿನಕ್ಕೆ ಕಾಲಿಟ್ಟ ಧರ್ಮ ಸಂರಕ್ಷಣಾ ರಥಯಾತ್ರೆ!

ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್‌ರಿಗೆ ಲಕ್ಷ್ಮಣ್‌ ದೂರು ನೀಡಿದ್ದಾರೆ. ದಿನಾಂಕ 26 ಮತ್ತು 27 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ H.D.ಕುಮಾರಸ್ವಾಮಿ ಆರೋಪಿಸಿದ್ದು ಆಧಾರ ರಹಿತ ಎಂದು M.ಲಕ್ಷ್ಮಣ್‌ ಹೇಳಿದ್ದಾರೆ. ಕುಮಾರಸ್ವಾಮಿಯವರ ಆರೋಪಗಳಿಗೆ M.ಲಕ್ಷ್ಮಣ್ ಸ್ಪಷ್ಟೀಕರಣ ದಾಖಲೆ ಕೇಳಿದ್ದರು. ದಾಖಲೆ ಕೇಳಿದ್ದಕ್ಕೆ HDK ಅಭಿಮಾನಿಗಳು ಎಂ.ಲಕ್ಷ್ಮಣ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

Exit mobile version