Site icon PowerTV

ಕಾಂಗ್ರೆಸ್ ಬಂದಿದೆ, ಗ್ರಹಣ ಹಿಡಿದಿದೆ : ಬಿಜೆಪಿ ಲೇವಡಿ

ಬೆಂಗಳೂರು : ರಾಜ್ಯ ಕಾಂಗ್ರೆಸ್​ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ(Siddaramaiah) ವಿರುದ್ಧ ಬಿಜೆಪಿ(BJP) ಕಿಡಿಕಾರಿದೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಇಡೀ ಕರ್ನಾಟಕಕ್ಕೆ ಗ್ರಹಣ ಹಿಡಿದಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಕಾಂಗ್ರೆಸ್ ಆಳ್ವಿಕೆಯಲ್ಲಿ ಇಡೀ ಕರ್ನಾಟಕ್ಕೆ ಗ್ರಹಣ ಹಿಡಿದಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಸಿಎಂ ಸಿದ್ದರಾಮಯ್ಯ ಅವರ ನೆರಳಿನ ಫೋಟೋವನ್ನು ಎಕ್ಸ್‌ನಲ್ಲಿ ಹಾಕಿಕೊಂಡು ವಿವಿಧ ಯೋಜನೆಗಳಿಗೆ ಗ್ರಹಣ ಹಿಡಿದಿದೆ ಎಂದು ಬಿಜೆಪಿ ಬರೆದುಕೊಂಡಿದೆ.

ಅಲ್ಲದೇ ಕಾವೇರಿಗೆ, ವಿದ್ಯುತ್‍ಗೆ, ಅಭಿವೃದ್ಧಿಗೆ, ಅನ್ನಭಾಗ್ಯಕ್ಕೆ, ಕೈಗಾರಿಕೆಗಳಿಗೆ, ಕುಡಿಯುವ ನೀರಿಗೆ, ಕೃಷಿ ಉತ್ಪನ್ನಗಳಿಗೆ ಹಾಗೂ ಬ್ರ್ಯಾಂಡ್ ಬೆಂಗಳೂರಿಗೆ ಗ್ರಹಣ ಹಿಡಿದಿದೆ. ಸರ್ಕಾರ ಜೇಬುಗಳ್ಳತನಕ್ಕೆ ಇಳಿದಿದೆ, ಎಚ್ಚರಿಕೆ ಎಂದು ಬಸ್‍ಗಳಲ್ಲಿ ಹಾಕಬೇಕು. ಸಾಮಾನ್ಯ ಬಸ್‍ಗಳ ದರವನ್ನೂ ನಾಲ್ಕೇ ತಿಂಗಳಲ್ಲಿ 20% ರಷ್ಟು ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರ ಹಗಲು ದರೋಡೆಗೆ ಇಳಿದಿದೆ. ಮೊದಲು 160 ರೂ. ನಲ್ಲಿ ಮುಗಿಯುತ್ತಿದ್ದ ಪ್ರಯಾಣಕ್ಕೆ ಈಗ 200 ರೂ. ಮಾಡಿ ಕೈ ಸುಟ್ಟುಕೊಳ್ಳಬೇಕಾಗಿದೆ. ಇನ್ನು ಒಂದೇ ತಿಂಗಳಲ್ಲಿ ಸ್ಥಗಿತಗೊಳ್ಳಲಿರುವ ಶಕ್ತಿ ಯೋಜನೆಯ ಎಲ್ಲಾ ಹೊರೆಯನ್ನೂ ಕರ್ನಾಟಕದ ಜನ ಹೊರಬೇಕಿರುವುದು ನಿಶ್ಚಿತ ಎಂದು ಹೇಳಿಕೊಂಡಿದೆ.

Exit mobile version