Site icon PowerTV

ಅಪ್ಪು 2ನೇ ವರ್ಷದ ಪುಣ್ಯಸ್ಮರಣೆ: ಸಮಾಧಿ ಬಳಿ ಅಭಿಮಾನಿಗಳ ಸಾಗರ!

ಬೆಂಗಳೂರು: ಇಂದು ಪುನೀತ್​ ರಾಜಕುಮಾರ್ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಅಪ್ಪು ಪುಣ್ಯಭೂಮಿ ಬಳಿ ನೂರಾರು ಅಭಿಮಾನಿಗಳು ಆಗಮಿಸುತ್ತಿದ್ದಾರೆ.

ಬೆಳ್ಳಗೆಯಿಂದಲೇ ಅಪ್ಪು ಪುಣ್ಯಭೂಮಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದ್ದು, ಕೈಯಲ್ಲಿ ಗುಲಾಬಿ ಹೂ ಹಿಡಿದು ನೂರಾರು ಅಭಿಮಾನಿಗಳು ಬಂದಿದ್ದಾರೆ. ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ ಎರಡು ವರ್ಷ ಸಂದಿವೆ. ಈ‌ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿ ಪುಣ್ಯಸ್ಮರಣೆ
ಮಾಡಲಾಗುತ್ತದೆ.

ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಧರ್ಮಸಂರಕ್ಷಣಾ ರಥಯಾತ್ರೆಗೆ ಚಾಲನೆ

ಹಠಾತ್​​ ಹೃದಯಾಘಾತದಿಂದ ಕೋಟ್ಯಂತರ ಅಭಿಮಾನಿಗಳನ್ನು ಅಗಲಿ ಇಹಲೋಕ ತ್ಯಜಿಸಿದ್ದ ಅಪ್ಪು ಅಗಲಿ 2 ವರ್ಷಗಳು ಕಳೆದರೂ ಅಭಿಮಾನಿಗಳ ಹೃದಯದಲ್ಲಿ ಅಭಿಮಾನ ಕಡಿಮೆಯಾಗಿಲ್ಲ. ಇನ್ನು ಡಾ.ರಾಜ್​ಕುಮಾರ್​​ ಫ್ಯಾಮಿಲಿಯಿಂದ ಪುಣ್ಯ ಭೂಮಿಯಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ.

Exit mobile version