Site icon PowerTV

ಪಕ್ಷದ ವಿಚಾರವಾಗಿ ಯಾವುದೇ ಹೇಳಿಕೆ ಕೊಡಬಾರದು: ಡಿಕೆಶಿ ವಾರ್ನಿಂಗ್​!

ಬೆಂಗಳೂರು: ಕಾಂಗ್ರೆಸ್​ ಶಾಸಕರಿಗೆ ಬಿಜೆಪಿ ಆಫರ್​ ನೀಡುತ್ತಿರುವ ವಿಚಾರವಾಗಿ ಯಾರು ಎಲ್ಲಿಯೂ ಮಾತನಾಡಬಾರದು ಇದು ಲಾಸ್ಟ್​ ವಾರ್ನಿಂಗ್​ ಎಂದು ಹೇಳಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಆಪರೇಷನ್​ ಕಮಲಕ್ಕೆ ಮುಂದಾಗಿರುವ ಬಿಜೆಪಿ ಪಕ್ಷ, ಕಾಂಗ್ರೆಸ್ ಶಾಸಕರಿಗೆ ಭಾರಿ ಮೊತ್ತದ ಆಫರ್ ನೀಡಲು ಮುಂದಾಗಿದೆ.  ಈ  ವಿಚಾರಕ್ಕೆ ಸಂಬಂಧಿಸಿ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ಕಾಂಗ್ರೆಸ್​ ಶಾಸಕರಿಗೆ ರಿಕ್ವೆಸ್ಟ್​ ಮತ್ತು ಲಾಸ್ಟ್​ ವಾರ್ನಿಂಗ್​ ನೀಡುತ್ತಿದ್ದೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಶಾಖಾದ್ರಿ ಮನೆಯಲ್ಲಿ ಚಿರತೆ, ಜಿಂಕೆ ಚರ್ಮ ಪತ್ತೆ : ದೂರು ದಾಖಲು!

ತೆಲಂಗಾಣ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಮಾದ್ಯಮದವರೊಂದಿಗೆ ಮಾತನಾಡಿ ಅವರು, ಬಹಳ ದೊಡ್ಡ ಷಡ್ಯಂತ್ರ ನಡೀತಾ ಇದೆ. ಯಾವುದೇ ಫಲ ಕೂಡ ಅವರಿಗೆ ಸಿಗಲ್ಲ. ಪ್ರತಿಯೊಬ್ಬರ ನಡೆ ಕೂಡ ನಮಗೆ ಗೊತ್ತಿದೆ. ದೊಡ್ಡವರು ಇದರಲ್ಲಿ ಪ್ರಯತ್ನ ಮಾಡ್ತಾ ಇದ್ದಾರೆ. ಬಹಳ ಪ್ರಯತ್ನ ಮಾಡ್ತಾ ಇದ್ದಾರೆ.

ಯಾವುದೇ ಹೇಳಿಕೆ ಯಾರು ಕೊಡಬಾರದು. ಪಕ್ಷದ ವಿಚಾರವಾಗಿ ಯಾವುದೇ ಹೇಳಿಕೆ ಕೊಡಬಾರದು. ಕೈಮುಗಿದು ಕೇಳಿಕೊಳ್ಳುತ್ತೇನೆ ಯಾವುದೇ ಹೇಳಿಕೆ ನೀಡಬೇಡಿ. ಇಲ್ಲದೆ ಹೊದರೇ ನೋಟೀಸ್ ನೀಡಬೇಕಾಗುತ್ತೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ತಮ್ಮ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

Exit mobile version