Site icon PowerTV

ಪರಮೇಶ್ವರ್​ರನ್ನ ಸಿಎಂ ಮಾಡಲ್ಲ ಅಂತ ಹೇಳಿದವರಿಗೆ ಬುದ್ದಿ ಇಲ್ಲ : ಸಚಿವ ಹೆಚ್.ಸಿ. ಮಹದೇವಪ್ಪ

ಬೆಂಗಳೂರು : ನಿನ್ನೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಮನೆಯಲ್ಲಿ ಡಿನ್ನರ್ ಪಾಲಿಟಿಕ್ಸ್ ವಿಚಾರ ಕುರಿತು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್‌.ಸಿ. ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಊಟಕ್ಕೆ ಹೋಗಿದ್ದೋ, ವಿಶೇಷ ಏನಿಲ್ಲ. ಊಟಕ್ಕೆ ಹೇಳಿದ್ರು ಹೋಗಿದ್ದೆವು, ಬೇರೆ ಏನು ವಿಶೇಷ ಇಲ್ಲ. ಸಭೆ ಮಾಡಿ ಊಟ ಮಾಡಿದೋ ಅಷ್ಟೇ ಎಂದು ಹೇಳಿದ್ದಾರೆ.

ಡಾ.ಜಿ ಪರಮೇಶ್ವರ್ ಸಿಎಂ ಆಗ್ತಾರಾ ಅನ್ನೋ ವಿಚಾರವಾಗಿ ಮಾತನಾಡಿದ ಅವರು, ಅವರನ್ನ ಸಿಎಂ ಮಾಡಲ್ಲ ಅಂತ ಹೇಳಿದವರಿಗೆ ಬುದ್ದಿ ಇಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಇರ್ತಾರೆ. ಸದ್ಯ ಸಿಎಂ ಹುದ್ದೆ ಖಾಲಿ ಇಲ್ಲ. ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರಲ್ವಾ, ಬದಲಾವಣೆ ಹೇಗೆ? ಎನ್ನುವ ಮೂಲಕ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದು ಸುಳಿವು ನೀಡಿದ್ದಾರೆ.

ಬೋಗಿ ಅಲ್ಲಾಡುತ್ತೆ ಅಷ್ಟೇ, ಟ್ರೈನ್ ಬೀಳಲ್ಲ

ಸರ್ಕಾರ ಬೀಳಿಸೋ ಪ್ರಯತ್ನ ನಡೆಯುತ್ತಿದ್ಯಾ? ಎಂಬ ಸುದ್ದಿಗಾರರ ಪ್ರಶ್ನೆಗೆ, ಬೋಗಿ ಇರುವಾಗ ಟ್ರೈನ್ ಓಡುತ್ತೆ. ಬೋಗಿ ಅಲ್ಲಾಡುತ್ತಿರುತ್ತೆ. ಬೋಗಿ ಅಲ್ಲಾಡುತ್ತೆ ಅಷ್ಟೇ, ಟ್ರೈನ್ ಬೀಳಲ್ಲ ಎಂದು ತಮ್ಮದೇ ಶೈಲಿಯಲ್ಲಿ ಮಹದೇವಪ್ಪ ಮಾರ್ಮಿಕ ಉತ್ತರ ನೀಡಿದ್ದಾರೆ.

ಪಕ್ಕದಲ್ಲೇ ಇರುವ ಡಿ.ಕೆ ಶಿವಕುಮಾರ್​ ಅವರಿಗೆ ಡಿನ್ನರ್​ ಪಾರ್ಟಿಗೆ ಆಹ್ವಾನ ಇಲ್ಲದ ವಿಚಾರವಾಗಿ ಮಾತನಾಡಿ, ಡಿ.ಕೆ ಶಿವಕುಮಾರ್​ ಅವರ ಆಹ್ವಾನ ನನಗೆ ಗೊತ್ತಿಲ್ಲ. ನಿನ್ನೆ ಡಾಕ್ಟರ್ ಊಟಕ್ಕೆ ಕರೆದಿದ್ರು ಊಟ ಮಾಡಿದ್ವಿ ಎಂದು ಜಾಣ್ಮೆಯ ಉತ್ತರ ನೀಡಿದ್ದಾರೆ.

Exit mobile version