Site icon PowerTV

ರೈಲ್ವೆ ಸಚಿವಾಲಯದ ಪ್ರಸ್ತಾವನೆಯಲ್ಲಿ ‘ಇಂಡಿಯಾ’ ಬದಲು ‘ಭಾರತ್’ ಹೆಸರು ಬಳಕೆ

ಬೆಂಗಳೂರು : ಕೇಂದ್ರ ಸಚಿವ ಸಂಪುಟಕ್ಕೆ ರೈಲ್ವೆ ಸಚಿವಾಲಯದ ಪ್ರಸ್ತಾವನೆಯಲ್ಲಿ ಇಂಡಿಯಾ (INDIA) ಎಂಬುದನ್ನು ಕೈಬಿಟ್ಟು ಎಲ್ಲ ಕಡೆ ಭಾರತ್ ಎಂದು ಬದಲಿಸಿದೆ ಎಂದು ವರದಿಯಾಗಿದೆ.

ಬಿಜೆಪಿ ಸರ್ಕಾರವು ಇಂಡಿಯಾ ಬದಲಿಗೆ ಭಾರತ್ (Bharat) ಎಂಬ ಹೆಸರು ಬಳಸುವ ಉದ್ದೇಶದ ನಡುವೆಯೇ ಈ ಬೆಳವಣಿಗೆಯಾಗಿದೆ. 3 ದಿನಗಳ ಹಿಂದೆ, ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ಸಮಿತಿಯು, ಎಲ್ಲಾ ಶಾಲಾ ಪಠ್ಯ ಪುಸ್ತಕಗಳಲ್ಲಿ ಸಾರ್ವತ್ರಿಕವಾಗಿ ಇಂಡಿಯಾವನ್ನು ಭಾರತ್ ಎಂದು ಬದಲಿಸಲು ಪ್ರಸ್ತಾಪಿಸಿತ್ತು.

ಸಂವಿಧಾನದಲ್ಲಿ ಇಂಡಿಯಾ ಮತ್ತು ಭಾರತಗಳನ್ನು ಪರಸ್ಪರ ಬದಲಿಯಾಗಿ ಬಳಸಲಾಗಿದೆ ಮತ್ತು ಕ್ಯಾಬಿನೆಟ್ ಪ್ರಸ್ತಾವನೆಗಳಲ್ಲಿ ಇದನ್ನು ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೇಂದ್ರ ಹೇಳಿದೆ. ರೈಲ್ವೆ ಸಚಿವಾಲಯದ ಪ್ರಸ್ತಾವನೆಯು ಬಹುಶಃ ಕ್ಯಾಬಿನೆಟ್‌ಗೆ ಬಳಸಲಾದ ಮೊದಲ ಪ್ರಸ್ತಾಪವಾಗಿದೆ ಎಂದು ಹೇಳಲಾಗಿದೆ.

Exit mobile version