Site icon PowerTV

ಹುಲಿ ಉಗುರು: ರಾಜ್ಯ ಸರ್ಕಾರದ್ದು ಸದಾರಮೆ ನಾಟಕ! – ಸಿಟಿ ರವಿ

ಬೆಂಗಳೂರು: ರಾಜ್ಯ ಸರ್ಕಾರದ್ದು ಹುಲಿ ಉಗುರು ಎಂಬ ಸದಾರಮೆ ನಾಟಕ. ರಾಜ್ಯದ ಜನರ ದಾರಿ ತಪ್ಪಿಸಲು ಕಾಂಗ್ರೆಸ್‌ ಹುಲಿ ಉಗುರಿನ ನಾಟಕವಾಡುತ್ತಿದೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಸಿ.ಟಿ.ರವಿ ಅವರು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಐಟಿ ದಾಳಿಯಲ್ಲಿ ಪತ್ತೆಯಾದ ಕೋಟ್ಯಂತರ ಹಣದ ಚರ್ಚೆಯ ದಾರಿ ತಪ್ಪಿಸುವ ನಾಟಕವನ್ನು ಕಾಂಗ್ರೆಸ್‌ ಆಡಿದೆ. ಜನರ ಆಕ್ರೋಶಕ್ಕೆ ವಿರಾಮ ಹಾಕಲು, ಕಮಿಷನ್ ಕಲೆಕ್ಟರ್, ಡೆಪ್ಯೂಟಿ ಕಮಿಷನ್ ಕಲೆಕ್ಟರ್ ಅವರ ಹುಲಿ ಉಗುರು ನಾಟಕ ಇದು ಎಂದು ಕಾಲೆಳೆದಿದ್ದಾರೆ.

ಇದನ್ನೂ ಓದಿ: ವರ್ತೂರು ಸಂತೋಷ್​ ಗೆ ಷರತ್ತುಬದ್ದ ಜಾಮೀನು ಮಂಜೂರು!

ಜನ ನೂರಾರು ವರ್ಷಗಳಿಂದ ಹುಲಿ ಉಗುರನ್ನ ಆಭರಣವಾಗಿ ಧರಿಸಿದ್ದಾರೆ. ಇಲಾಖೆಗೆ ಕಾಣದ್ದೇನು ಅಲ್ಲ. ಈಗ ಸರ್ಕಾರದ ವೈಫಲ್ಯ, ಬೋಗಸ್ ಭರವಸೆಗಳಿಗೆ ಜನ ಆಕ್ರೋಶಿತರಾಗಿದ್ದಾರೆ. ರೈತರಿಗೆ ವಿದ್ಯುತ್ ಪೂರೈಸುತ್ತಿಲ್ಲ, ಕತ್ತಲೆ ಭಾಗ್ಯ, ಬರ ಪರಿಸ್ಥಿತಿ ನಿರ್ವಹಣೆ ವೈಫಲ್ಯ, ಶಾಸಕರು ಬಂಡಾಯದ ಬಸ್ ಹತ್ತುತ್ತಿರುವ ಬೇಗುದಿ, ಪಂಚರಾಜ್ಯ ಚುನಾವಣೆಗೆ ನಡೆಸಿದ ಕಲೆಕ್ಷನ್ ಐಟಿ ಇಲಾಖೆ ಪಾಲು, ಸರ್ಕಾರಕ್ಕೆ ಜನರ ಎದುರು ತಲೆಯೆತ್ತಿ ನಡೆಯಲಾಗುತ್ತಿಲ್ಲ ಎಂದು ಕುಟುಕಿದ್ದಾರೆ.

Exit mobile version