Site icon PowerTV

ಕುಮಾರಸ್ವಾಮಿ ನಿಮ್ಮನ್ನು ಅಮಿತ್​ ಶಾ ಗೆ ಅಡ ಇಡ್ತಾರೆ : ಸಿ.ಎಂ.ಇಬ್ರಾಹಿಂ!

ದೆಹಲಿ: ಲೋಕಸಭೆ ಚುನಾವಣೆಯಲ್ಲಿ ಮೂರು ಸ್ಥಾನಗಳಿಗಾಗಿ H.D.ಕುಮಾರಸ್ವಾಮಿ ನಿಮ್ಮನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಡ ಇಡುತ್ತಿದ್ದಾರೆ ಎಂದು JDS ನಾಯಕ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ದೆಹಲಿಯಲ್ಲಿ ಮತನಾಡಿದ ಅವರು, ಕೈ ಮುಗಿದು ಹೇಳ್ತೇನೆ ಬೇಡ, 91 ವರ್ಷ ಆಗಿದೆ ನಿಮಗೆ. ಅಟಲ್ ಬಿಹಾರಿ ವಾಜಪೇಯಿ ನಿಮಗೆ ಬೆಂಬಲ ಕೊಡ್ತೀನಿ ಅಂದಾಲೇ ನೀವ್ ಬಿಟ್ಟು ಬಂದವರು. ಈಗ ಏನ್ ಪರಿಸ್ಥಿತಿ ಬಂದಿದೆ ನಿಮಗೆ. ಕೆಂಪೇಗೌಡರ ನಾಡು ನಮ್ಮ ಕರ್ನಾಟಕ. ಕುಮಾರಸ್ವಾಮಿಗೆ ಬುದ್ಧಿ ಹೇಳಿ. ನಾವು ಇಂಡಿಪೆಂಡೆಂಟ್ ಆಗಿ ನಿಂತರೂ ಸಹ 3 ಸ್ಥಾನ ಗೆಲ್ಲುತ್ತೇವೆ.

ಇದನ್ನೂ ಓದಿ: ರಾಮನಗರ ಜಿಲ್ಲೆ ವಿವಾದ ನಡುವೆ ವಿಜಯಪುರ ಜಿಲ್ಲೆ ಹೆಸರು ಬದಲಾವಣೆಗೆ ಹೆಚ್ಚಿದ ಕೂಗು!

ಶದರೇ, ಇವರ ಜೊತೆ ಹೋದರೆ 1 ಸೀಟ್ ಸಹ ನಾವು ಗೆಲ್ಲೋಲ್ಲ. ಮದುವೆಗೇ ಬ್ರಾಹ್ಮಣರು ಬರ್ತಾ ಇಲ್ಲಾ, ಇನ್ನು ಒಕ್ಕಲಿಗರಿಗೆ ವೋಟ್ ಹಾಕೋಕೆ ಬರ್ತಾರಾ ಎಂದು ಪ್ರಶ್ನಿಸಿದರು.

Exit mobile version