Site icon PowerTV

ಪವರ್ ಟಿವಿ ಇಂಪ್ಯಾಕ್ಟ್ : ನಟ ದರ್ಶನ್ ವಿರುದ್ಧ ದೂರು ದಾಖಲು

ಬೆಂಗಳೂರು : ಪವರ್​ ಟಿವಿಯಲ್ಲಿ ದರ್ಶನ್ ಹುಲಿ ಉಗುರು ಧರಿಸಿರುವ ವರದಿ ಪ್ರಸಾರ ಬೆನ್ನಲ್ಲೇ ನಟ ದರ್ಶನ್ ಹಾಗೂ ವಿನಯ್ ಗುರೂಜಿ ವಿರುದ್ಧ ದೂರು ದಾಖಲಾಗಿದೆ.

ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ನಟ ದರ್ಶನ್ ಹಾಗೂ ಗೌರಿಗದ್ದೆ ಆಶ್ರಮದಲ್ಲಿ ಹುಲಿಯ ಚರ್ಮದ ಮೇಲೆ ಕುಳಿತಿದ್ದ ವಿನಯ್‌ ಗುರೂಜಿ ವಿರುದ್ಧ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಅವರು ಅರಣ್ಯ ಭವನದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಕಾನೂನು ಪ್ರಕಾರ ನಟ ದರ್ಶನ್ ಹಾಗೂ ವಿನಯ್ ಗುರೂಜಿ ಅವರಿಗೆ ಅಧಿಕಾಗಳು ನೋಟಿಸ್ ನೀಡುವ ಸಾಧ್ಯತೆಯಿದೆ. ಈ ಮೂಲಕ ಕಾರಣವನ್ನು ಕೇಳಬಹುದು. ದರ್ಶನ್ ಅವರು ಅರಣ್ಯ ಇಲಾಖೆ ರಾಯಭಾರಿಯಾಗಿದ್ದಾರೆ. ಅವರಿಗೆ ಕನಿಷ್ಟ ಪ್ರಜ್ಞೆ ಇಲ್ಲವೇ? ಎಂದು ಸಂಘಟನೆ ಪ್ರಶ್ನೆ ಮಾಡಿದೆ.

ರಾಕ್​ಲೈನ್​ ವೆಂಕಟೇಶ್ ಗೆ ಸಂಕಷ್ಟ?

ನಟ ದರ್ಶನ್ ಹಾಗೂ ರಾಕ್​ಲೈನ್​ ವೆಂಕಟೇಶ್​ ಅವರು ಹುಲಿ ಉಗುರಿನ ಲಾಕೆಟ್​ ಧರಿಸಿದ್ದರು. ಆ ಫೋಟೋಗಳನ್ನು ಇಟ್ಟುಕೊಂಡು ಈಗ ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡಲಾಗುತ್ತಿದೆ. ಇನ್ನೂ ಹಲವು ಸೆಲೆಬ್ರಿಟಿಗಳ ಫೋಟೋಗಳು ಸಹ ವೈರಲ್ ಆಗುವ ಸಾಧ್ಯತೆ ಇದೆ.

Exit mobile version