Site icon PowerTV

ದ್ವೇಷ-ಅಸೂಯೆ ಅಳಿದು, ಸತ್ಯ-ಪ್ರೀತಿ ವಿಜೃಂಭಿಸಲಿ : ಸಿದ್ದರಾಮಯ್ಯ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾಡಿನ ಜನತೆಗೆ ವಿಜಯದಶಮಿ ಶುಭಾಶಯ ಕೋರಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ಅಧರ್ಮದ ವಿರುದ್ಧ ಧರ್ಮವು ಜಯಿಸಿದ ಈ ವಿಜಯದಶಮಿಯ ದಿನದಂದು ನಮ್ಮ ನಡುವಿನ ದ್ವೇಷ, ಅಸೂಯೆ, ಅಸತ್ಯಗಳು ಅಳಿದು, ಸತ್ಯ, ಪ್ರೀತಿ, ಸೌಹಾರ್ದತೆಗಳು ವಿಜೃಂಭಿಸಲಿ ಎಂದು ಹಾರೈಸುತ್ತೇನೆ. ಕರುನಾಡು ಸುಖ, ಸಮೃದ್ಧಿಯನ್ನೊಳಗೊಂಡ ಸರ್ವಜನಾಂಗದ ಶಾಂತಿಯ ತೋಟವಾಗಲಿ ಎಂದು ಆಶಿಸುತ್ತಾ, ನಾಡಬಂಧುಗಳಿಗೆ ವಿಜಯದಶಮಿಯ ಶುಭ ಕೋರುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪೋಸ್ಟ್ ಮಾಡಿದ್ದು, ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಡದೇವತೆ ತಾಯಿ ಶ್ರೀ ಚಾಮುಂಡೇಶ್ವರಿಯ ಅನುಗ್ರಹದಿಂದ ನಾಡಿನೆಲ್ಲೆಡೆ ಸುಖ, ಶಾಂತಿ, ನೆಮ್ಮದಿ ನೆಲೆಸಲಿ ಹಾಗೂ ಒಳ್ಳೆ ಮಳೆ-ಬೆಳೆಯಿಂದ ರೈತರ ಬಾಳು ಹಸನಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಬೊಮ್ಮಾಯಿ ಶುಭ ಹಾರೈಕೆ

ಯಾ ದೇವಿ ಸರ್ವಭೂತೆಷು ಶಕ್ತಿ ರೂಪೇಣ ಸಂಸ್ಥಿತಾ. ನಮಸ್ತಸ್ಸ್ಯೆ ನಮಸ್ತಸ್ಯೈ ನಮೋ ನಮಃ. ‌‌ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಕ್ಸ್​ನಲ್ಲಿ ಪೋಸ್ಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

Exit mobile version