Site icon PowerTV

ಕರಾಳ ದಿನ : ಬೈಕ್​ಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸವಾರ ಸಾವು

ತುಮಕೂರು : ದಸರಾ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ ಮನೆಮಾಡಿದೆ. ಇಂದು ನಾಡಿನೆಲ್ಲೆಡೆ ದಸರಾ ಆಚರಣೆ ಮಾಡಲಾಗ್ತಿದ್ರೆ ಇತ್ತ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 105A ತೊರೆಮಾವಿನಹಳ್ಳಿ ಗೇಟ್ ಬಳಿ ಕಿಲ್ಲರ್ ಲಾರಿಯೊಂದು ವ್ಯಕ್ತಿಯ ಉಸಿರು ಕಸಿದಿದೆ.

ಬೈಕ್​ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ತಾಲೂಕಿನ ಹೊಸಹಳ್ಳಿ ಮೂಲದ ಅಶೋಕ (55) ವರ್ಷದ ವ್ಯಕ್ತಿಯ ಮೇಲೆ ತಮಿಳುನಾಡು ಮೂಲದ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ  ವ್ಯಕ್ತಿ ಸಾವನ್ನಪ್ಪಿದ್ದಾರೆ. ಇನ್ನೂ ಲಾರಿಯ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತುರುವೇಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಕೈಗೊಂಡಿರುವ ಪೊಲೀಸರು ಲಾರಿ ಚಾಲಕನಿಗಾಗಿ ಹುಡುಕಾಟಕ್ಕಾಗಿ ಬಲೆ ಬಿಸಿದ್ದಾರೆ.

Exit mobile version