Site icon PowerTV

ಒಂಭತ್ತು ಪುಟ್ಟ ಹೆಣ್ಣುಮಕ್ಕಳ ಪಾದಪೂಜೆ ಮಾಡಿದ ಯೋಗಿ ಆದಿತ್ಯನಾಥ್

ಬೆಂಗಳೂರು : ನವರಾತ್ರಿ ಪ್ರಯುಕ್ತ ಘೋರಕ್ ನಾಥ್ ದೇಗುಲದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಶೇಷ ಪೂಜೆಗಳಲ್ಲಿ ಭಾಗವಹಿಸಿದ್ದಾರೆ.

ನವರಾತ್ರಿಯ 9ನೇ ದಿನವಾದ ನವಮಿಯಂದು ನಡೆದ ಕನ್ಯಾಪೂಜೆ ಕಾರ್ಯಕ್ರಮದಲ್ಲೂ ಯೋಗಿ ಆದಿತ್ಯನಾಥ್ ಪಾಲ್ಗೊಂಡಿದ್ದರು. ಕನ್ಯಾಪೂಜೆಯ ಅಂಗವಾಗಿ ಒಂಭತ್ತು ಪುಟ್ಟ ಹೆಣ್ಣುಮಕ್ಕಳನ್ನು ದುರ್ಗೆಯ ಒಂಭತ್ತು ಅವತಾರಗಳೆಂದು ಭಾವಿಸಿ ಪಾದಪೂಜೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ನಡೆದ ಮಾತೃಶಕ್ತಿ ಪೂಜೆಯಲ್ಲೂ ಸಹ ಯೋಗಿ ಆದಿತ್ಯನಾಥ್ ಪಾಲ್ಗೊಂಡಿದ್ದರು. ಯೋಗಿ ಆದಿತ್ಯನಾಥ್ ಘೋರಕನಾಥ್ ದೇವಾಯದ ಪೀಠಾಧ್ಯಕ್ಷರೂ ಆಗಿದ್ದಾರೆ. ನವರಾತ್ರಿಯ ಸಂದರ್ಭದಲ್ಲಿ ಘೋರಕ್ ನಾಥ್ ದೇವಾಲಯದಲ್ಲಿ ಒಂಭತ್ತು ದಿನಗಳ ಕಾಲ ದುರ್ಗಾ ಸಪ್ತಶತಿ ಪಾರಾಯಣ ಮಾಡಲಾಗುತ್ತದೆ. 9ನೇ ದಿನದಂದು ಒಂಭತ್ತು ಕನ್ಯೆಯರ ಪಾದಪೂಜೆ ಮಾಡಿ, ಅವರ ಆಶೀರ್ವಾದ ಪಡೆಯುವ ಸಂಪ್ರದಾಯವಿದೆ. ಯೋಗಿ ಆದಿತ್ಯನಾಥ್ ತಾವು ಸನ್ಯಾಸ ದೀಕ್ಷೆ ಪಡೆದಾಗಿನಿಂದ ಈ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ.

ಇಂದು ಮಹಾನವಮಿಯ ಶುಭ ಸಂದರ್ಭದಲ್ಲಿ ಘೋರಕ್ ನಾಥ್ ದೇಗುಲದಲ್ಲಿ ಶಕ್ತಿ ರೂಪದ ಹೆಣ್ಣು ಮಕ್ಕಳಿಗೆ ಪೂಜೆ ಸಲ್ಲಿಸಲಾಯಿತು. ಶಕ್ತಿಯ ಅಧಿದೇವತೆಯಾದ ಭಗವತಿ ಮಾತೆಯ ಆಶೀರ್ವಾದವು ಸಮಸ್ತ ಜೀವಜಗತ್ತಿನಲ್ಲಿ ಉಳಿಯಲಿ ಮತ್ತು ಎಲ್ಲರಿಗೂ ಕ್ಷೇಮವಾಗಲಿ, ಇದು ನನ್ನ ಪ್ರಾರ್ಥನೆಯಾಗಿದೆ ಎಂದು ಯೋಗಿ ಆದಿತ್ಯನಾಥ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

Exit mobile version