Site icon PowerTV

ನನ್ನ ಮಗ ಬಿಗ್ ಬಾಸ್ ಗೆದ್ದು ಬರುತ್ತೇನೆ ಅಂತ ಹೇಳಿ ಹೋಗಿದ್ದ : ಸಂತೋಷ್ ತಾಯಿ ಕಣ್ಣೀರು

ಬೆಂಗಳೂರು : 10 ವರ್ಷದ ಹಿಂದೆ ನಾನು ಚೈನ್ ಮಾಡಿಕೊಟ್ಟಿದ್ದೆ. ಅವನು ಚೈನ್‌ಗೆ ಪೆಂಡೆಂಟ್ ಮಾಡಿಸಿಕೊಂಡಿದ್ದ. ನಾವು ಕೂಡ ಪ್ರಾಣಿ ಸಾಗುತ್ತೇವೆ, ಅದರ ಬಗ್ಗೆ ಮಾಹಿತಿ ಇದ್ದರೆ ಹಾಕಿಕೊಳ್ಳುತ್ತಿರಲಿಲ್ಲ. ಯಾರೋ ದ್ವೇಷದಿಂದ ಹೀಗೆ ಮಾಡಿದ್ದಾರೆ ಎಂದು ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ತಾಯಿ ಮಂಜುಳ ಕಣ್ಣೀರಿಟ್ಟಿದ್ದಾರೆ.

ವರ್ತೂರು ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನನ್ನ ಮಗ ಬಿಗ್ ಬಾಸ್ ನಿಂದ ಗೆದ್ದು ಬರುತ್ತೇನೆ ಅಂತ ಹೇಳಿ ಹೋಗಿದ್ದ. ಬೆಳೆಯೋರನ್ನ ತುಳಿಯೋರು ಜಾಸ್ತಿಯಾಗಿದ್ದಾರೆ. ಪೆಂಡೆಂಟ್ ಅನ್ನ ನನ್ನ ಮಗನೇ ತೆಗೆದುಕೊಂಡಿದ್ದ. ಆದರೆ, ಎಲ್ಲಿ ತೆಗೆದುಕೊಂಡಿದ್ದಾನೆ ಎನ್ನುವ ಮಾಹಿತಿ ಇಲ್ಲ. ಅವನಿಗೆ ಯಾರು ದ್ವೇಶಿಗಳಿದ್ದಾರೆ ಅಂತ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಅವನ ಮೇಲೆ ಪಿತೂರಿ ಮಾಡಿದ್ದಾರೆ

ನನ್ನ ಮಗನ ರೀತಿ ಬೇರೆಯವರು ಇದನ್ನು ಹಾಕಿಕೊಳ್ಳುತ್ತಿದ್ದಾರೆ. ಅವರ ಮೇಲೂ ಕೂಡ ಕ್ರಮ ಆಗಬೇಕು. ಅವನು ಇದನ್ನು ಹಿಂದಿನಿಂದಲೂ ಕೂಡ ಹಾಕಿಕೊಳ್ಳುತ್ತಿದ್ದ. ಈಗ ಯಾರೋ ಅವನ ಮೇಲೆ ಪಿತೂರಿ ಮಾಡಿದ್ದಾರೆ. ಫಂಕ್ಷನ್​ಗಳಿಗೆ ಹೋಗುವಾಗ ಇದನ್ನ ಹಾಕಿಕೊಳ್ಳುತ್ತಿದ್ದ. ಇದೇನು ಹೊಸದಾಗಿ ಹಾಕಿಕೊಳ್ಳುತ್ತಿದ್ದ ಜೈನ್ ಅಲ್ಲ ಎಂದು ತಿಳಿಸಿದ್ದಾರೆ.

ನನ್ನ ಮಗನನ್ನು ನೀವೇ ಕಾಪಾಡಬೇಕು

ಚೈನ್​ಗೆ ಪೆಂಡೆಂಟ್ (ಲಾಕೆಟ್) ಮಾಡಿಸಿಕೊಂಡಿರುವ ಬಗ್ಗೆ ನನಗೂ ಹೇಳಿದ್ದ. ಆದರೆ ಇದು ತಪ್ಪು ಎನ್ನುವುದು ನನಗೂ ಗೊತ್ತಿರಲಿಲ್ಲ. ದೊಡ್ಡಪ್ಪ, ಅಣ್ಣಂದಿರು ವಕೀಲರ ಜೊತೆ ಅಲ್ಲಿಗೆ ಹೋಗಿದ್ದಾರೆ. ಅವನಿಗೆ ಆಗದೇ ಇರುವವರು ಈ ರೀತಿ ಮಾಡಿದ್ದಾರೆ. ನನ್ನ ಮಗನನ್ನು ನೀವೇ ಕಾಪಾಡಬೇಕು ಎಂದು ಕಣ್ಣೀರು ಹಾಕುತ್ತಾ ಮಾಧ್ಯಮದವರಿಗೆ ಕೈಮುಗಿದು ಬೇಡಿಕೊಂಡಿದ್ದಾರೆ.

Exit mobile version