Site icon PowerTV

ಒಳ್ಳೆಯದು ಯಾವಾಗಲೂ ಕೆಟ್ಟದ್ದನ್ನು ಗೆಲ್ಲುತ್ತದೆ : ನಟ ದರ್ಶನ್

ಬೆಂಗಳೂರು : ಆಯುಧ ಪೂಜೆ, ವಿಜಯದಶಮಿ ಹಾಗೂ ನಾಡಹಬ್ಬ ದಸರಾಗೆ ನಟ ದರ್ಶನ್ ತೂಗುದೀಪ ಅವರು ಶುಭಾಶಯ ತಿಳಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಒಳ್ಳೆಯದು ಯಾವಾಗಲೂ ಕೆಟ್ಟದ್ದನ್ನು ಗೆಲ್ಲುತ್ತದೆ ಎಂದು ನಾಡಹಬ್ಬ ದಸರಾ ನಮಗೆ ಸೂಚಿಸುತ್ತದೆ. ತಾಯಿ ಚಾಮುಂಡೇಶ್ವರಿ ನಿಮಗೂ ಮತ್ತು ನಿಮ್ಮ ಪ್ರೀತಿಪಾತ್ರರಿಗೂ ಆರೋಗ್ಯ, ಸುಖ ಸಂಪತ್ತು ನೀಡಲೆಂದು ಬಯಸುತ್ತಾ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು ಎಂದು ನಟ ದರ್ಶನ್ ಪೋಸ್ಟ್ ಮಾಡಿದ್ದಾರೆ.

ಇನ್ನೂ ಕಾಟೇರ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಸಹ ಶುಭಾಶಯ ಕೋರಿದ್ದಾರೆ. ಸರ್ವರಿಗೂ ನಾಡಹಬ್ಬ ದಸರಾದ ಪ್ರೀತಿಯ ಶುಭಾಶಯಗಳು. ನಿಮ್ಮ ಬದುಕಿನ ಹಾದಿಯಲ್ಲಿ ನಗು ತುಂಬಿರಲಿ ಎಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

Exit mobile version