Site icon PowerTV

3 ದಿನಗಳ ಕಾಲ ಸಿಎಂ ಮೈಸೂರು ಪ್ರವಾಸ!

ಮೈಸೂರು: ಮೈಸೂರಿಗೆ ಆಗಮಿಸಿರುವ ಸಿಎಂ ಸಿದ್ದರಾಮಯ್ಯ 3 ದಿನಗಳ ಕಾಲ ಪ್ರವಾಸ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಇಂದು ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಮೈಸೂರು ಮಹಾರಾಣಿ ಕಾಲೇಜಿನ ಸುತ್ತಲೂ ಶಿಥಿಲಗೊಂಡಿರುವ ಕಟ್ಟಡಗಳನ್ನ ಪರಿಶೀಲಿಸಿದ್ದಾರೆ.  ಇನ್ನು ಸಂಜೆ 4 ಗಂಟೆಗೆ ನಡೆಯುವ ವೈಮಾನಿಕ ಪ್ರದರ್ಶನವನ್ನ ವೀಕ್ಷಣೆ ಮಾಡಲಿದ್ದಾರೆ. ಇನ್ನು ಮಂಗಳವಾರ ಬೆಳಗ್ಗೆ 8.30ಕ್ಕೆ ಸುತ್ತೂರು ಶಾಖಾ ಮಠಕ್ಕೆ ತೆರಳಲಿದ್ದಾರೆ. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡಿ ಬೆಟ್ಟಕ್ಕೆ ತೆರಳ ಚಾಮುಂಡಿ ದರ್ಶನ ಪಡೆಯಲಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ಸರ್ಕಾರ ಉರುಳಿದ್ದಕ್ಕೆ ಬೇರೆಯವರ ಮೇಲೆ ಆರೋಪ ನಿರರ್ಥಕ : ಸಿಎಂ ಸಿದ್ದರಾಮಯ್ಯ

ಅ.24 ಮಧ್ಯಾಹ್ನ 1.46ಕ್ಕೆ ನಂದಿ ಧ್ವಜಕ್ಕೆ ಪೂಜೆ ನೆರವೇರಿಸಿ ಸಂಜೆ 4.40ಕ್ಕೆ ವಿಜಯದಶಮಿ ಮೆರವಣಿಗೆ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ. ರಾತ್ರಿ 7.30ಕ್ಕೆ ಪಂಜಿನ ಕವಾಯತು ವೀಕ್ಷಿಸಲಿದ್ದಾರೆ. ಅ.25ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಅ.25ರಂದು ಸಂಜೆ ಮೈಸೂರಿನಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ.

Exit mobile version