Site icon PowerTV

ಶಿವಮೊಗ್ಗದಲ್ಲಿ ಕಳೆಗಟ್ಟಿದ ಆಯುಧ ಪೂಜೆಯ ಸಂಭ್ರಮ

ಶಿವಮೊಗ್ಗ : ರಾಜ್ಯದಾದ್ಯಂತ ನಾಡಹಬ್ಬದ ದಸರಾ ಕಳೆಗಟ್ಟಿದ್ದು, ಶಿವಮೊಗ್ಗ ಜಿಲ್ಲೆಯಾದ್ಯಂತ ಆಯುಧ ಪೂಜೆಯನ್ನು ಇಂದು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಜನರು ತಮ್ಮ ವಾಹನಗಳಿಗೆ ಪೂಜೆ ಮಾಡಿಸಿಕೊಳ್ಳಲು ಬೆಳಗ್ಗಿನಿಂದಲೇ ದೇವಸ್ಥಾನಗಳ ಮುಂದೆ ಸಾಲುಗಟ್ಟಿ ನಿಂತಿದ್ದರು.

ಇನ್ನು ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿಯೂ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಜೊತೆಗೆ ಪೊಲೀಸರ ಶಸ್ತ್ರಾಸ್ತ್ರಗಳಿಗೂ ಪೂಜಿಸಲಾಯಿತು. ಈ ವೇಳೆ ಪೊಲೀಸ್ ವಾಹನಗಳಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು.

ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಕೂಡ ಪೂಜೆಯಲ್ಲಿ ಪಾಲ್ಗೊಂಡು ದೇವಿ ಆಶೀರ್ವಾದ ಪಡೆದರು. ಜೊತೆಗೆ ಬಂದೂಕುಗಳು ಹಾಗೂ ರಿವಾಲ್ವರ್ ಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಯುಧ ಪೂಜೆಯನ್ನು ಶಿವಮೊಗ್ಗದಲ್ಲಿ ಆಚರಿಸಲಾಯಿತು.  ಸದಾಕಾಲ ಸಮವಸ್ತ್ರದಲ್ಲೇ ಕಾಲ ಕಳೆಯುವ ಪೊಲೀಸ್ ಸಿಬ್ಭಂಧಿಗಳು, ಇಂದು ಕಲರ್ ಕಲರ್ ಸಾಂಪ್ರದಾಯಿಕ ಧಿರಿಸಿನಲ್ಲಿ ಕಂಗೊಳಿಸಿದರು.

Exit mobile version