Site icon PowerTV

ಅಯ್ಯೋ ಪಾಪ..! ವಿದ್ಯುತ್ ತಂತಿ ತಗುಲಿ 30 ಎಕರೆ ಕಬ್ಬು ಬೆಳೆ ಭಸ್ಮ

ಬೆಳಗಾವಿ : ವಿದ್ಯುತ್ ತಂತಿ ತಗುಲಿ 30 ಎಕರೆ ಕಬ್ಬು ಸುಟ್ಟು ಭಸ್ಮವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿವಟಗುಂಡಿ ಗ್ರಾಮದಲ್ಲಿ ನಡೆದಿದೆ.

ಚಿವಟಗುಂಡಿ ಗ್ರಾಮದ ಚೆನ್ನಬಸಪ್ಪ ಮಲ್ಲೂರು, ಬಸನಗೌಡ ಸಂಗನಗೌಡ, ಪ್ರಶಾಂತ ಪಾಟೀಲ, ಬಸವರಾಜ ಮಲ್ಲೂರ, ಮಲ್ಲೇಶಪ್ಪ ಬಗನಾಳ, ವೀರನಗೌಡ ಮಲ್ಲೂರ ಸೇರಿದಂತೆ ಒಟ್ಟು 8 ಜನರಿಗೆ ಕಬ್ಬು ಸೇರಿದ್ದು, ಅಂದಾಜು 50ಲಕ್ಷ ರೂಪಾಯಿ ಮೌಲ್ಯದ 30 ಎಕರೆ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿದೆ. ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಬ್ಬಿಗೆ ಬೆಂಕಿ ಹತ್ತಿರುವುದಾಗಿ ರೈತರು ಆರೋಪಿಸಿದ್ದಾರೆ.

ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ವಿದ್ಯುತ್ ತಂತಿ ದುರಸ್ತಿ ಮಾಡದ ಹೆಸ್ಕಾಂ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ. ಜಮೀನಿನಲ್ಲಿ ಇದ್ದ ನೀರಾವರಿ ಮೋಟಾರು, ಪೈಪ್​​ಗಳು, ಕೇಬಲ್, ಕರೆಂಟ್ ಬಾಕ್ಸ್ ಗಳು ಸುಟ್ಟು ಭಸ್ಮವಾಗಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Exit mobile version