Site icon PowerTV

ದುರ್ಗಾದೇವಿಗೆ ರಕ್ತ ಅರ್ಪಿಸಿದ ಶ್ರೀರಾಮ ಸೇನೆ ಕಾರ್ಯಕರ್ತ

ಬೆಳಗಾವಿ : ಶ್ರೀರಾಮ ಸೇನೆ ಕಾರ್ಯಕರ್ತ ದುರ್ಗಾದೇವಿ ಮೂರ್ತಿಗೆ ರಕ್ತ ಅರ್ಪಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನಡೆದಿದೆ.

ತಲವಾರ್‌ನಿಂದ ಬೆರಳು ಕೊಯ್ದುಕೊಂಡು ದೇವಿಗೆ ರಕ್ತ ಅರ್ಪಣೆ ಮಾಡಿದ್ದಾರೆ. ನವರಾತ್ರಿ ಉತ್ಸವದಲ್ಲಿ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ. ಕಾರ್ಯಕರ್ತ ತನ್ನ ಬೆರಳು ಕೊಯ್ದುಕೊಂಡು ದೇವಿಯ ಮೂರ್ತಿಯ ಹಣೆಗೆ ರಕ್ತ ಹಚ್ಚಿದ್ದಾರೆ.

ಬಸ್ತವಾಡ ಗ್ರಾಮದ ದುರ್ಗಾಮಾತಾ ಉತ್ಸವ ಕಮಿಟಿಯಿಂದ ಪ್ರತಿಷ್ಠಾಪನೆ ಮಾಡಲಾಯಿತು. ನೂರಾರು ಹಿಂದೂ ಸಂಘಟನೆಗಳ ಕಾರ್ಯಕರ್ತರು ಕೈಯಲ್ಲಿ ತಲವಾರ್ ಹಿಡಿದು ಮೆರವಣಿಗೆ ನಡೆಸಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳು ಹಾಗೂ ಬಾಲಕಿಯರು ತಲಾವರ್​​ ಹಿಡಿದು ಮೆರವಣಿಗೆಯಲ್ಲಿ ಭಾಗಿಯಾದ್ರು. ನೂರಾರು ಯುವಕರು ಹಾಗೂ ಯುವತಿಯರು ಕೈಯಲ್ಲಿ ತಲವಾರ್​​ ಹಿಡಿದು ದೌಡದಲ್ಲಿ ಭಾಗಿಯಾದ್ದರು.

Exit mobile version