Site icon PowerTV

ಯುವಕ ಯುವತಿಯರ ಮಧ್ಯೆ ಗಲಾಟೆ!

ಬೆಂಗಳೂರು: ಯುವತಿಯರನ್ನ ಚುಡಾಯಿಸಿದ್ದಕ್ಕೆ ಯುವಕ ಯುವತಿಯರ ಮಧ್ಯೆ ಗಲಾಟೆ ನಡೆದಿರುವ ಘಟನೆ ಬೆಂಗಳೂರಿನ ಚರ್ಚ್ ಸ್ಟ್ರೀಟ್​​​ನ Burger seigneur ಮುಂಭಾಗ ನಡೆದಿದೆ.

ಡ್ರಂಕನ್ & ಡ್ಯಾಡಿ ಪಬ್ ಮುಂದೆ ಯುವತಿಯರ ಹುಚ್ಚಾಟ ಪ್ರಕರಣ ಮಾಸುವ ಮುನ್ನ ಮತ್ತೊಂದು ಗಲಾಟೆ ನಡೆದಿದೆ. ಕಾಲೇಜು ಯುವತಿಯರು ಹಾಗೂ ಯುವಕರ ಮಧ್ಯೆ ಗಲಾಟೆ ನಡೆದಿದೆ, ಯುವತಿಯರಿಗೆ ಅಶ್ಲೀಲ ಪದಗಳಿಂದ ಗ್ಯಾಂಗ್ ನಿಂದಿಸಿತ್ತು. ಇದರಿಂದ ರೊಚ್ಚಿಗೆದ್ದು ಯುವಕರನ್ನ ತಳ್ಳಾಡಿ ಯುವತಿಯರು ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ನಾಡಹಬ್ಬ ದಸರಾ ಮೇಲೆಯೂ ಉಗ್ರರ ಕರಿನೆರಳು? ಪೊಲೀಸ್​ ಬಿಗಿ ಬಂದೋಬಸ್ತ್​

ರಸ್ತೆಯಲ್ಲೇ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಬಿಡಿಸಲು ಬಂದ ಸ್ಥಳೀಯರ ಮೇಲೂ ಹಲ್ಲೆ ಮಾಡಿರೋ ಆರೋಪ ಕೇಳಿಬಂದಿದೆ. ಈ ವೇಳೆ ಓರ್ವ ಯುವಕ ಗಾರ್ಡನ್ ಮಧ್ಯೆ ಬಿದ್ದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Exit mobile version