Site icon PowerTV

ಚಂದದ ನರ್ಸ್​ಗಳು ನಂಗೆ ಅಜ್ಜಾ ಎನ್ನುವುದು ತರಾಸ್ ಆಗೇತಿ : ಶಾಸಕ ರಾಜು ಕಾಗೆ ವ್ಯಾಮೋಹದ ಮಾತು

ಬೆಳಗಾವಿ : ತುಂಬಿದ ಸಭೆಯಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಹುಡುಗಿಯರ ಸೌಂದರ್ಯ ಬಗ್ಗೆ ಮಾತಾಡಿದ್ದಾರೆ. ಹುಡುಗಿಯರ ಬಗ್ಗೆ ವ್ಯಾಮೋಹದ ಮಾತನಾಡಿರುವ ಶಾಸಕರ ನಡವಳಿಕೆಗೆ ವ್ಯಾಪಕ ಆಕ್ಷೇಪ ಕೇಳಿಬಂದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅವರಖೋಡ ಗ್ರಾಮದಲ್ಲಿ ನಡೆದ ದಸರಾ ಸಾಂಸ್ಕ್ರತಿಕ‌ ಕಾರ್ಯಕ್ರಮದಲ್ಲಿ ನರ್ಸ್‌ಗಳ ಬಗ್ಗೆ ಬಹಿರಂಗವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಶಾಸಕ ರಾಜು ಕಾಗೆ ಅವರು, ‘ಚಂದ ನರ್ಸ್‌ಗಳು ನಂಗೆ ಅಜ್ಜಾ ಎನ್ನುವುದು ತರಾಸ್ ಆಗೇತಿ’ ಎಂದು ಹೇಳಿದ್ದಾರೆ.

ಅಥಣಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ನನಗೆ ಲೀವರ್ ಆಪರೇಷನ್ ಆಗಿತ್ತು, ಆವಾಗ್ ಡಾಕ್ಟರ್ ಬಂದು ಪದೇ ಪದೆ ಅರಾಮ್ ಆಗಿದೆಯಾ ಎಂದು ಕೇಳ್ತಿದ್ರು. ಡಾಕ್ಟರ್ ಅವರು ಬಂದು ಕೇಳಿದ್ದು ಏನು ತರಾಸ್ ಆಗ್ತಿರಲಿಲ್ಲ. ಆದರೆ, ಅಲ್ಲಿನ ಚಂದ್ ನರ್ಸ್‌ಗಳು ಬಂದು ನಂಗೆ ಅಜ್ಜಾ ಅನ್ನುತ್ತಿದ್ದಿದ್ದು ನೋವಾಗ್ತಿತ್ತು ಎಂದು ತಿಳಿಸಿದ್ದಾರೆ.

ಈ ವೇಳೆ ವೇದಿಕೆಯಲ್ಲಿದ್ದ ಶಾಸಕ ಲಕ್ಷ್ಮಣ ಸವದಿ, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ರಾಜು ಕಾಗೆ ಅವರ ಮಾತಿಗೆ ನಕ್ಕು, ಹೇಳಿಕೆ ಆನಂದಿಸಿದರು. ಇತ್ತ ಸಾರ್ವಜನಿಕ ಜೀವನದಲ್ಲಿರುವವರಿಗೆ ಸಭ್ಯತೆಯ ಮಾತುಗಳು ಮುಖ್ಯ ಎಂದು ಸಾರ್ವಜನಿಕರ ಆಕ್ರೋಶ ಹೊರಹಾಕಿದ್ದಾರೆ. ಈ ರೀತಿಯ ಮಾತುಗಳಿಂದ ಸಮಾಜಕ್ಕೆ ಶಾಸಕರು ಯಾವ ಸಂದೇಶ ನೀಡಲು ಹೊರಟಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Exit mobile version