Site icon PowerTV

ದುರ್ಗಾ ಮಾತೆ ಎಲ್ಲರಿಗೂ ಉತ್ತಮ ಆರೋಗ್ಯ ಕರುಣಿಸಲಿ : ಪ್ರಧಾನಿ ಮೋದಿ

ನವದಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದುರ್ಗಾ ಪೂಜೆ ಪ್ರಯುಕ್ತ ದೇಶದ ಜನತೆಗೆ ಶುಭ ಹಾರೈಸಿದ್ದಾರೆ.

ದೇಶದಾದ್ಯಂತ ಇರುವ ನನ್ನ ಕುಟುಂಬದ ಸದಸ್ಯರಿಗೆ ದುರ್ಗಾ ಪೂಜೆಯ ಶುಭಾಶಯಗಳು. ದುರ್ಗಾ ಮಾತೆಯು ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಸಂತೋಷದಾಯಕ ಜೀವನವನ್ನು ಕರುಣಿಸಲಿ’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್​​’ನಲ್ಲಿ ಬರೆದುಕೊಂಡಿದ್ದಾರೆ.

ದೇಶದಾದ್ಯಂತ ನವರಾತ್ರಿ ರಂಗು ತುಂಬಿಕೊಂಡಿದೆ. ದಸರಾ ಅಂಗವಾಗಿ ದೇಶದ ಹಲವೆಡೆ ಪ್ರಮುಖ ದುರ್ಗಾ ದೇವಸ್ಥಾನಗಳಲ್ಲಿ ದೇವರಿಗೆ ನಿತ್ಯ ವಿಶೇಷ ಪೂಜೆ, ಹೋಮ, ಹವನಗಳು ನಡೆಯುತ್ತಿವೆ. ಪ್ರತಿದಿನ ದೇವಿಗೆ ವಿಶಿಷ್ಟ ಅಲಂಕಾರ ಮಾಡಲಾಗುತ್ತಿದ್ದು, ದರ್ಶನ ಪಡೆಯಲು ಸಾವಿರಾರು ಭಕ್ತರು ಮುಗಿಬೀಳುತ್ತಿದ್ದಾರೆ.

Exit mobile version