Site icon PowerTV

ಸುವರ್ಣ ಸೌಧವನ್ನು ಭೂತ ಬಂಗಲೆ ಮಾಡುವುದು ಸರಿಯಲ್ಲ : ಬಸವರಾಜ್ ಹೊರಟ್ಟಿ

ಹುಬ್ಬಳ್ಳಿ : ಇವತ್ತಿನ ದಿನದಲ್ಲಿ ರಾಜಕಾರಣದ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇವತ್ತಿ‌ನ ದಿನಮಾನದಲ್ಲಿ ರಾಜಕೀಯ ಬಗ್ಗೆ ಕಡಿಮೆ ಮಾತಾಡಿದ್ರೆ ಒಳ್ಳೇದು. ಇವತ್ತು ಕಮಿಟ್​ಮೆಂಟ್ ಅನ್ನೋದೆ ಇಲ್ಲ. ಜನರೂ ಕೂಡ ಯಾರು ಕೆಲಸ ಮಾಡುತ್ತಾರೆ, ಯಾರಿಗೆ ವೋಟ್ ಹಾಕಬೇಕು ಎನ್ನುವ ಯೋಚನೆಯೂ ಇಲ್ಲ. ದಿನೇ ದಿನೇ ಕಮಿಟ್​ಮೆಂಟ್ ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬರ, ಅತಿವೃಷ್ಟಿ ಇದ್ದಾಗ ರಾಜ್ಯದ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಬೇಕು. ದಿನೇ ದಿನೆ ಅವರನ್ನ, ಇವರನ್ನ ಬೈಯ್ಯೋದೇ ಆಗಿದೆ. ನಾವು ಕಠಿಣ ಸಂದರ್ಭದಲ್ಲಿ ಇದ್ದೇವೆ, ಆಳುವ ಪಕ್ಷ, ವಿರೋಧ ಪಕ್ಷ ಯಾರೇ ಮಾಡಿದರೂ ಸರಿ ಅಲ್ಲ. ರಾಜಕೀಯ ಕಲುಷಿತವಾಗಿದೆ. ಚುನಾವಣೆಯಲ್ಲಿ ಗೆದ್ದ ಮೇಲೆ ಎಲ್ಲರ ಯೋಗಕ್ಷೇಮ ನೋಡಬೇಕು ಎಂದು ತಿಳಿಸಿದರು.

ಭೂತ ಬಂಗಲೆ ಮಾಡುವುದು ಸರಿ ಅಲ್ಲ

ಇದೀಗ ಬೆಳಗಾವಿಯಲ್ಲಿ ಅಧಿವೇಶನ ಮಾಡಲು ನಾನು ಪತ್ರ ಬರೆದಿದ್ದೇನೆ. ನಾಲ್ಕೈದು ಕೋಟಿ ಖರ್ಚು ಮಾಡಿ ಅದನ್ನು ಭೂತ ಬಂಗಲೆ ಮಾಡುವುದು ಸರಿ ಅಲ್ಲ, ಸುವರ್ಣ ಸೌಧ ಕಟ್ಟಿದ ಮೇಲೆ ಇಲ್ಲಿನ ಜನರ ಸಮಸ್ಯೆ ಆಲಿಸಬೇಕು ಎಂದು ಬಸವರಾಜ್ ಹೊರಟ್ಟಿ ಹೇಳಿದರು.

Exit mobile version