Site icon PowerTV

ದಸರಾ ಸಡಗರ: ಜನರಿಗೆ ಅಗತ್ಯ ವಸ್ತುಗಳ ‘ದರ’ ಏರಿಕೆ ಬಿಸಿ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಯುಧಪೂಜೆ ಖರೀದಿ ಭರಾಟೆ ಜೋರಾಗಿದ್ದು, ಬೆಂಗಳೂರಿಗರು ಕೆ.ಆರ್.ಮಾರ್ಕೆಟ್​​​ನಲ್ಲಿ ಖರೀದಿಗೆ ಮುಗಿಬಿದ್ದಿದ್ದಾರೆ.

ಆಯುಧ ಪೂಜೆ-ವಿಜಯದಶಮಿ ಸಂಭ್ರಮಕ್ಕೆ ಬರದ ಗರ ಬಡಿದಿರುವ ಜತೆಗೆ, ಹಬ್ಬ ಆಚರಣೆಗೆ ಹೂವು, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿದೆ. ಕೆ.ಆರ್.ಮಾರುಕಟ್ಟೆಯಲ್ಲಿ ಬಾಳೆ ಕಂಬ ಹಾಗೂ ಬೂದು ಕುಂಬಳವನ್ನು ರಾಶಿ ಹಾಕಿಕೊಂಡು ವ್ಯಾಪಾರ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಆದರೆ ಬೆಲೆ ಏರಿಕೆಯ ಬಿಸಿಯಿಂದ ಜನರು ಅಳೆದು ತೂಗಿ ಖರೀದಿ ಮಾಡುವಂತಾಗಿದೆ.

ಇದನ್ನೂ ಓದಿ: ಕಾಲಜ್ಞಾನ ಪ್ರಕಾರ ಮೈಸೂರು ದಸರಾ ಹಬ್ಬಕ್ಕೆ ಕಂಟಕ!

ಆಯುಧ ಪೂಜೆ ಮತ್ತು ವಿಜಯದಶಮಿ ಪ್ರತಿಯೊಬ್ಬರೂ ಆಚರಣೆ ಮಾಡುವ ಹಬ್ಬ. ಎಲ್ಲಅಂಗಡಿಗಳು, ಮನೆ, ದೇಗುಲ ಹೀಗೆ ಎಲ್ಲೆಡೆ ಸಡಗರ ಮನೆ ಮಾಡಿರುತ್ತದೆ. ವಾಹನ, ಆಯುಧಗಳು, ಯಂತ್ರೋಪಕರಣ, ದೇವರ ಉತ್ಸವಗಳು ನಡೆಯುತ್ತವೆ. ಹೂವಿನ ಅಲಂಕಾರವೇ ಈ ಹಬ್ಬದ ವಿಶೇಷ. ಹೀಗಾಗಿ ಕಳೆದ ಕೆಲವು ದಿನಗಳಿಂದ ಪಾತಾಳಕ್ಕೆ ಕುಸಿದಿದ್ದ ಹೂವಿನ ಬೆಲೆ, ಈಗ ಗಗನಕ್ಕೇರಿದೆ. ಇನ್ನೊಂದೆಡೆ ಹಣ್ಣು ಮತ್ತು ತರಕಾರಿಗಳ ಬೆಲೆಯೂ ದುಬಾರಿಯಾಗಿದೆ.

Exit mobile version