Site icon PowerTV

ಪಾಸ್‌ಪೋರ್ಟ್ ಪರಿಶೀಲನೆಗೆ ಲಂಚಕ್ಕೆ ಬೇಡಿಕೆ!

ಕಲಬುರಗಿ: ಪಾಸ್‌ಪೋರ್ಟ್ ಪರಿಶೀಲನೆಗೆ ಠಾಣೆಯ ರೈಟರ್ 1,500 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಘಟನೆ, ಕಲಬುರಗಿಯ ಅಫಜಲಪುರದ ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ದೇವಲ ಗಾಣಗಾಪುರ ಠಾಣೆಯ ರೈಟರ್ ಮಲ್ಲಿಕಾರ್ಜುನ ಲಂಚಕ್ಕೆ ಬೇಡಿಕೆ ಇಟ್ಟ ವ್ಯಕ್ತಿಯಾಗಿದ್ದಾನೆ. ಲಂಚಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ ಕಾಲರ್ ಎಳೆದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ. ಲಾಲ್ ಅಹ್ಮದ್ ಮತ್ತು ನರಹರಿ ಎಂಬ ಯುವಕರು ಪಾಸ್‌ಪೋರ್ಟ್‌ ಪರಿಶೀಲನೆಗೆ ಠಾಣೆಗೆ ತೆರಳಿದ್ದರು.

ಇದನ್ನೂ ಓದಿ: ದಸರಾ ಸಡಗರ: ಜನರಿಗೆ ಅಗತ್ಯ ವಸ್ತುಗಳ ‘ದರ’ ಏರಿಕೆ ಬಿಸಿ!

ಈ ವೇಳೆ ರೈಟರ್ ಮಲ್ಲಿಕಾರ್ಜುನ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ನಿರಾಕರಿಸಿದ ನರಹರಿಯ ಕಾಲರ್ ಎಳೆದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ರೈಟರ್ ಮಲ್ಲಿಕಾರ್ಜುನ ದರ್ಪಕ್ಕೆ ನೊಂದ ಯುವಕರು ಕಾನೂನು ಕ್ರಮ ಕೈಗೊಳ್ಳುವಂತೆ SPಗೆ ದೂರು ನೀಡಿದ್ದಾರೆ.

Exit mobile version