Site icon PowerTV

ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಗೆ ಇನ್ನೊಂದೆ ದಿನ ಬಾಕಿಯಿದ್ದು, ಇಂದು ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಕಳೆಗಟ್ಟಿದೆ.

ಅರಮನೆಯಲ್ಲಿ ಆಯುಧ ಪೂಜೆಗೆ ಸಕಲ ಸಿದ್ಧತೆಗಳು ಶುರುವಾಗಿದ್ದು, ಕೆಲವೇ ಕ್ಷಣಗಳಲ್ಲಿ ಅರಮನೆ ಕಲ್ಯಾಣ ಮಂಟಪದಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ಶುರುವಾಗಲಿದೆ.

ಸದ್ಯ ಇಂದಿನ ಪೂಜಾ ಕೈಂಕರ್ಯಗಳ ವೇಳಾಪಟ್ಟಿಯೂ ಬಿಡುಗಡೆಯಾಗಿದ್ದು, ಅರಮನೆಯಲ್ಲಿ ದುರ್ಗಾಷ್ಠಮಿ ಆಚರಣೆ ಚಂಡಿ‌ ಹೋಮದೊಂದಿಗೆ ಆರಂಭಗೊಳ್ಳಲಿದೆ. ಬೆಳಗ್ಗೆ 6ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಲಿದ್ದು, ಬೆಳಗ್ಗೆ 6.05 ರಿಂದ 06.15ಕ್ಕೆ ಖಾಸಾ ಆಯುಧಗಳು ಅರಮನೆಯ ಕೋಡಿ‌ ಸೋಮೇಶ್ವರ ದೇಗುಲಕ್ಕೆ ರವಾನೆ ಆಗಲಿದೆ.

ಬೆಳಗ್ಗೆ 7.15ಕ್ಕೆ ಖಾಸಾ ಆಯುಧಗಳು ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆಗೆ ವಾಪಸ್ಸಾಗಲಿದ್ದು, ಕಲ್ಯಾಣ ಮಂಟಪಕ್ಕೆ ಆಯುಧಗಳ ಆಗಮನವಾಗಲಿದೆ. ಬಳಿಕ ಬೆಳಗ್ಗೆ 9.30ಕ್ಕೆ ಚಂಡಿಹೋಮ ಪೂರ್ಣಾಹುತಿ ಪೂರ್ಣಗೊಳ್ಳುತ್ತಿದ್ದಂತೆ, ಮಧ್ಯಾಹ್ನ12.20ಕ್ಕೆ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಆಯುಧಗಳಿಗೆ ಪೂಜೆ ಸಲ್ಲಿಸಲಿದ್ದಾರೆ. ಇನ್ನು, ಸಂಜೆ ಸಂಜೆ ಯದುವೀರ್ ಅವರಿಂದ ಖಾಸಗಿ ದರ್ಬಾರ್ ನಡೆಸಿದ ಬಳಿಕ ಸಿಂಹ ವಿಸರ್ಜನೆ ಮಾಡಲಿದ್ದಾರೆ.

Exit mobile version