Site icon PowerTV

5 ವರ್ಷ ಪೂರೈಸಿ, ಮತ್ತೆ 5 ವರ್ಷ ಅಧಿಕಾರಕ್ಕೆ ಬರುತ್ತೇವೆ : ಸಚಿವ ಡಿ. ಸುಧಾಕರ್

ಚಿತ್ರದುರ್ಗ : ಕಾಂಗ್ರೆಸ್​ನಲ್ಲಿ DCM ಅವರದ್ದು ಒಂದು ಗ್ಯಾಂಗ್, CM ಅವರದ್ದು ಒಂದು ಗ್ಯಾಂಗ್ ಇದೆ. ಈ ಸರ್ಕಾರ ಅಲ್ಪಾವಧಿಯ ಸರ್ಕಾರ ಎಂದಿರುವ ಮಾಜಿ ಡಿಸಿಎಂ ಗೋವಿಂದ ಕಾರಜೋಳಗೆ ಸಚಿವ ಡಿ. ಸುಧಾಕರ್ ತಿರುಗೇಟು ನೀಡಿದರು.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಸಿಎಂ, ಡಿಸಿಎಂ ಟೀಮ್‌ ಇಲ್ಲ, ಒಂದೇ ಟೀಮ್ ಕಾಂಗ್ರೆಸ್ ಟೀಮ್ ಇದೆ. ಸಣ್ಣಪುಟ್ಟ ವಿಚಾರ ಇರಬಹುದು, ಕೆಲವು ಹೇಳಿಕೊಳ್ಳಬಹುದು. ನಮ್ಮದು ಅಲ್ಪಾವಧಿ ಸರ್ಕಾರ ಅಲ್ಲ, 5 ವರ್ಷ ಪೂರೈಸಿ, ಮತ್ತೆ 5 ವರ್ಷ ಆಡಳಿತಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆ.ಚ್.ಡಿ ಕುಮಾರಸ್ವಾಮಿ ಆರೋಪಕ್ಕೆ ಟಾಂಗ್ ನೀಡಿದ ಅವರು, ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮಾಡಿದ್ದು ನಮ್ಮ ಮೇಲೆ ಹೇಳ್ತಿದ್ದಾರೆ. ನಮಗೆ ಕಮಿಷನ್ ಪಡಿಯೋದು, ಕಟ್ ರೂಟ್ ಆಡಳಿತ ಗೊತ್ತಿಲ್ಲ. ರಾಜ್ಯದಲ್ಲಿ ಬರ ಇದೆ, ಡ್ಯಾಂಗಳಲ್ಲಿ ನೀರಿಲ್ಲ, ಕಲ್ಲಿದ್ದಲು ಅಭಾವವಿದೆ. ಕೃತಕವಾಗಿ ವಿದ್ಯುತ್ ಕೊರತೆ ಸೃಷ್ಠಿಸುವ ಪ್ರಶ್ನೆ ಉದ್ಭವಿಸಲ್ಲ ಎಂದು ಕುಟುಕಿದರು.

ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ

ಬಿಜೆಪಿ ಟಿಕೆಟ್​ಗಾಗಿ ಹಣ ಪಡೆದಿರುವ ಆರೋಪ ಪ್ರಕರಣ ಸಂಬಂಧ ಮಾತನಾಡಿದ ಅವರು, ಬಿಜೆಪಿ ಪಕ್ಷದ ಆಂತರಿಕ ವಿಚಾರದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಈಗಾಗಲೇ‌ ಕೆಲವರು ಇಂಥದ್ದೆ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದಾರೆ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ. ಸಚಿವರು, ಶಾಸಕರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸಚಿವ ಸುಧಾಕರ್ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದರು.

Exit mobile version