Site icon PowerTV

So Cute.. ಬಾಗಿಲು ತೆಗೆದು ಹೊರ ಹೋದ ಜಾಣ ಬೆಕ್ಕು

ಬೆಂಗಳೂರು : ಇಲ್ಲೊಂದು ಬೆಕ್ಕು ಅತ್ಯಂತ ಜಾಣತನದಿಂದ ಮನೆಯ ಕೋಣೆಯ ಬಾಗಿಲನ್ನು ತೆರೆದಿದೆ. ಬಾಗಿಲನ್ನು ತೆರೆಯಲು ಈ ಬೆಕ್ಕು ಯೋಚಿಸಿ ಹೆಜ್ಜೆ ಇಡುವ ಪರಿಯೂ ಅಚ್ಚರಿ ಮೂಡಿಸಿದೆ. ಬೆಕ್ಕುಗಳೂ ಇಷ್ಟು ಅದ್ಭುತವಾಗಿ ಯೋಚಿಸುತ್ತವಾ ಎಂಬ ಅಚ್ಚರಿ ಸಹಜವಾಗಿಯೇ ಮನಸ್ಸಿನಲ್ಲಿ ಮೂಡುತ್ತದೆ.

ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಈ ಕ್ಲಿಪ್‌ನಲ್ಲಿ ಬೆಕ್ಕುಗಳು ಕೂಡಾ ಎಷ್ಟು ಸಮಯೋಚಿತವಾಗಿ ಯೋಚಿಸುತ್ತವೆ ಎಂಬುದು ತಿಳಿದು ಬರುತ್ತದೆ. ಮನೆಯ ಕೋಣೆಯೊಳಗೆ ಇರುವ ಬೆಕ್ಕು ಮೊದಲು ಬಾಗಿಲಿನ ಮೇಲೆ ಇದ್ದ ಚಿಲಕದಂತಹ ವಸ್ತುವನ್ನು ಕೆಳಗೆ ಬೀಳಿಸಲು ಪ್ರಯತ್ನಿಸುತ್ತದೆ. ಆದರೆ, ಈ ಪ್ರಯತ್ನ ಫಲಕೊಡುವುದಿಲ್ಲ.

ಅಲ್ಲಿಂದ ಇಳಿದು ಮುಂದೇನು ಮಾಡುವುದು ಎಂದು ಕೆಲ ಸೆಕೆಂಡು ಯೋಚಿಸಿದ ಬೆಕ್ಕು, ಬಳಿಕ ಅಲ್ಲೇ ಇದ್ದ ಕಪಾಟಿನ ಮೇಲೆ ಹತ್ತಿ ಬಾಗಿಲಿಗೆ ಸಿಕ್ಕಿಸಿದ್ದ ಚಿಲಕದಂತಹ ವಸ್ತುವನ್ನು ಕೆಳಗೆ ಬೀಳಿಸುತ್ತದೆ. ಅಲ್ಲಿಂದ ಟೇಬಲ್‌ಗೆ ಹಾರಿ ಎರಡು ಕಾಲಿನಲ್ಲಿ ನಿಂತು ಬಾಗಿಲನ್ನು ತೆರೆದು ಈ ಬೆಕ್ಕು ಹೊರಗೆ ಹೋಗುವ ರೀತಿ ಅಚ್ಚರಿ ಮೂಡಿಸುತ್ತದೆ. ತನ್ನ ಮನೆಯ ಬೆಕ್ಕಿನ ಈ ಬುದ್ಧಿವಂತಿಕೆಯನ್ನು ಮನೆ ಮಾಲೀಕರು ಸೆರೆ ಹಿಡಿದಿದ್ದಾರೆ.

 

Exit mobile version